ನವದೆಹಲಿ(ಆ.01): ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಂ ಸಿಂಗ್‌ಗೆ 2017ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿ ನೀಡಬೇಕು ಎಂದು 4208 ಮಂದಿ ಶಿಫಾರಸು ಮಾಡಿದ್ದರು ಎಂದು ಗೊತ್ತಾಗಿದೆ. ಈ ಬಾರಿ ಪದ್ಮ ಪ್ರಶಸ್ತಿಗೆ 18768 ಅರ್ಜಿಗಳನ್ನು ಕೇಂದ್ರ ಗೃಹ ಸಚಿವಾಲಯ ಸ್ವೀಕರಿಸಿದ್ದು, ಡೇರಾ ಸಚ್ಚಾ ಮುಖ್ಯಸ್ಥನಿಗೆ ಮೂರರಲ್ಲಿ ಒಂದು ಪದ್ಮ ಪ್ರಶಸ್ತಿ ನೀಡಬೇಕೆಂದು 4208ಶಿಫಾರಸು ಸಲ್ಲಿಸಲಾಗಿದೆ. ಈ ಎಲ್ಲಾ ಶಿಫಾರಸುಗಳಲ್ಲಿ ‘ಸೇಂಟ್ ಡಾ. ಗುರ್ಮೀತ್ ರಾಮ್ ರಹೀಂ ಸಿಂಗ್ ಜಿ ಇನ್ಸಾನ್’ ಹೆಸರನ್ನು ಉಲ್ಲೇಖಿಸಲಾಗಿದೆ.