Asianet Suvarna News Asianet Suvarna News

ಅಮೆರಿಕಾಗೆ ಅಕ್ರಮ ಪ್ರವೇಶ : 100 ಕ್ಕೂ ಹೆಚ್ಚು ಭಾರತೀಯರ ಬಂಧನ

  • ಬಂಧಿತರು ಒರೆಗಾನ್'ನ ಫೆಡರಲ್ ಕಾರಾಗೃಹದಲ್ಲಿ
  • ದಲ್ಲಾಳಿಗಳ ಮೂಲಕ ಮೆಕ್ಸಿಕೋ ಗಡಿಯಿಂದ ಪ್ರವೇಶ
42 more Indians detained for illegally entering USA

ವಾಷಿಂಗ್ಟನ್[ಜೂ.22]: ಅಮೆರಿಕಾಗೆ ಅತಿಕ್ರಮ ಪ್ರವೇಶ ಮಾಡಿದ 100ಕ್ಕೂ ಹೆಚ್ಚು ಭಾರತೀಯರನ್ನು ವಲಸೆ ಹಾಗೂ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಇದು 2ನೇ ಘಟನೆಯಾಗಿದ್ದು, ಕೆಲವೇ ದಿನಗಳ ಹಿಂದೆ 52ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ನಿನ್ನೆ 45ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಬಂಧಿತರನ್ನು ನ್ಯೂಮೆಕ್ಸಿಕೋದ ಒರೆಗಾನ್ ಫೆಡರಲ್ ಕಾರಾಗೃಹದಲ್ಲಿಡಲಾಗಿದೆ. ಸೆರೆವಾಸಿಗಳು ಮೆಕ್ಸಿಕೋ ಗಡಿಯಿಂದ ಅತಿಕ್ರಮ ಪ್ರವೇಶಿಸಿರುವುದಾಗಿ ವಲಸೆ ಹಾಗೂ ಕಸ್ಟಮ್ಸ್ ಜಾರಿ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಕ್ರಮ ವಲೆಸಿಗರ ಬಗ್ಗೆ ಡೊನಾಲ್ಡ್ ಟ್ರಂಪ್ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದ ನಂತರ ಭಾರತೀಯರ ಬಂಧನ ಪ್ರಕರಣಗಳು ಹೆಚ್ಚಾಗುತ್ತಿವೆ. ಅತಿಕ್ರಮ ಗಡಿ ಪ್ರವೇಶಸಿಸುವವರನ್ನು ಬಂಧನದಲ್ಲಿಡಲು ನ್ಯೂ ಮೆಕ್ಸಿಕೋ ಬಳಿ ತಾತ್ಕಾಲಿಕ ಬಂಧನ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಬಂಧಿತರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಅವರ ಜೊತೆ ಸಂಪರ್ಕ ಸಾಧಿಸುವುದಾಗಿ ಭಾರತೀಯ ರಾಯಭಾರಿ ಕಚೇರಿ ಪ್ರಕಟಣೆ ತಿಳಿಸಿದೆ. 

ವರದಿಯೊಂದರ ಪ್ರಕಾರ ಕಳೆದ 4 ವರ್ಷಗಳಲ್ಲಿ 4 ಸಾವಿರ ಮಕ್ಕಳು, 350 ಮಕ್ಕಳು ಒಳಗೊಂಡು 30 ಸಾವಿರಕ್ಕೂ ಹೆಚ್ಚು ಭಾರತೀಯರು ಅಮೆರಿಕಾಕೆ ಅತಿಕ್ರಮ ಪ್ರವೇಶಿಸಿದ್ದಾರೆ. ವಿಸಾ ತೊಂದರೆ ಹಾಗೂ ಮಾನವ ಕಳ್ಳ ಸಾಗಣೆಯ ಕಾರಣದಿಂದ ದಲ್ಲಾಳಿಗಳ ಮೂಲಕ ಮೆಕ್ಸಿಕೋ ಗಡಿಯ ಮೂಲಕ ಅಮೆರಿಕಾ ಪ್ರವೇಶಿಸುತ್ತಾರೆ. ಬಂಧಿತ ಬಹುತೇಕ ಭಾರತೀಯರು ಒಬ್ಬಂಟಿಯಾಗಿ ಆಗಮಿಸುತ್ತಾರೆ. ಮಾನವ ಕಳ್ಳ ಸಾಗಣೆ ಮೂಲಕ ಆಗಮಿಸುವವರಿಗೆ ಯಾವುದೇ ರಾಜಕೀಯ ಆಶ್ರಯ ದೊರೆಯುವುದಿಲ್ಲ. ಈಗ ಸೆರೆವಾಸಿಗಳಾಗಿರುವ ಭಾರತೀಯರು ಪಂಜಾಬ್ ಸಿಖ್ ಹಾಗೂ ಆಂಧ್ರಪ್ರದೇಶದ ಕ್ರೈಸ್ತ  ಸಮುದಾಯದವರಾಗಿದ್ದಾರೆ.

Follow Us:
Download App:
  • android
  • ios