ಲಿಂಗಾಯತ ಮುಖಂಡರಿಗೆ 40 ಟಿಕೆಟ್‌ ನೀಡಲು ಬೇಡಿಕೆ

40 Ticket For Lingayats
Highlights

ರಾಜ್ಯಾದ್ಯಂತ ಸುಮಾರು 40 ಕ್ಷೇತ್ರಗಳನ್ನು ಲಿಂಗಾಯತ ಮುಖಂಡರಿಗೆ ನೀಡುವಂತೆ ಕಾಂಗ್ರೆಸ್‌ನ ಲಿಂಗಾಯತ ನಾಯಕರು ಪಕ್ಷದ ನಾಯಕತ್ವವನ್ನು ಕೋರಿದ್ದಾರೆ.

ಬೆಂಗಳೂರು : ರಾಜ್ಯಾದ್ಯಂತ ಸುಮಾರು 40 ಕ್ಷೇತ್ರಗಳನ್ನು ಲಿಂಗಾಯತ ಮುಖಂಡರಿಗೆ ನೀಡುವಂತೆ ಕಾಂಗ್ರೆಸ್‌ನ ಲಿಂಗಾಯತ ನಾಯಕರು ಪಕ್ಷದ ನಾಯಕತ್ವವನ್ನು ಕೋರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದ್ದ ಲಿಂಗಾಯತ ಸಮುದಾಯದ ನಾಯಕರಾದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌, ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೇ ಹೆಬ್ಬಾಳಕರ್‌ ಮೊದಲಾದವರು ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಈ ಬಾರಿ 40 ಕ್ಷೇತ್ರಗಳನ್ನು ನೀಡಬೇಕು.

ವಿಶೇಷವಾಗಿ ಪಂಚಮಸಾಲಿ ಒಳಪಂಗಡಕ್ಕೆ 20ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಬೇಕು ಎಂದು ಕೋರಿದರು ಎನ್ನಲಾಗಿದೆ. ಲಿಂಗಾಯತ ನಾಯಕರ ಕೋರಿಕೆಯನ್ನು ಪಕ್ಷದ ಹೈಕಮಾಂಡ್‌ ಮುಂದಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಾಯಕರಿಗೆ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.

loader