ಭಾರೀ ಬಿರುಗಳಿ, ಸಿಡಿಲಿನ ಅಬ್ಬರ: 40 ಜನರ ಸಾವು..!

First Published 29, May 2018, 1:19 PM IST
40 Dead In Thunderstorms In Uttar Pradesh, Bihar And Jharkhand
Highlights

ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಭಾರೀ ಬಿರುಗಾಳಿ ಮತ್ತು ಸಿಡಿಲು ಜನರ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರದಲ್ಲಿ ಬಿರುಗಾಳಿ, ಸಿಡಿಲಿಗೆ ಒಟ್ಟಾರೆ 40 ಜನರು ಬಲಿಯಾಗಿದ್ದಾರೆ.

ನವದೆಹಲಿ[ಮೇ 29]: ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಭಾರೀ ಬಿರುಗಾಳಿ ಮತ್ತು ಸಿಡಿಲು ಜನರ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರದಲ್ಲಿ ಬಿರುಗಾಳಿ, ಸಿಡಿಲಿಗೆ ಒಟ್ಟಾರೆ 40 ಜನರು ಬಲಿಯಾಗಿದ್ದಾರೆ.  

ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ 5 ಜನ ಮರಣ ಹೊಂದಿ,  4 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಆಶ್ವಥಿ ಹೇಳಿದ್ದಾರೆ. ಖಾನ್ ಪುರದಲ್ಲಿ ಒಬ್ಬರು ಹಾಗೂ ರಾಯ್ ಬರೇಲಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿದೆ. 

ಇನ್ನು ಬಿಹಾರ ಮತ್ತು ಜಾಖರ್ಖಂಡ್ ನಲ್ಲೂ ಬಿರುಗಾಳಿಯ ಅಬ್ಬರ ಜೋರಾಗಿದ್ದು, ಬಿಹಾರ ರಾಜ್ಯವೊಂದರಲ್ಲೇ ಸುಮಾರು 19 ಜನರು ಅಸುನೀಗಿದ್ದಾರೆ. ಜಾರ್ಖಂಡ್ ನಲ್ಲಿ 12 ಜನ ಮೃತಪಟ್ಟು 28 ಜನ ಗಾಯಗೊಂಡಿದ್ದಾರೆ. 

ಸಿಡಿಲು ಮತ್ತು ಬಿರುಗಾಳಿ ಎದುರಾಗಿರುವ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

loader