ಶಿರಸಿ :  ಕಳೆದೆರಡು ತಿಂಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಕೆ ದರ ಲೋಕಸಭಾ ಚುನಾವಣಾ ನಂತರದಲ್ಲಿ ಏರಿಕೆಯಾಗಬಹುದೆಂದು ನಿರೀಕ್ಷೆ ಇತ್ತು. ಆದರೆ, ಚುನಾವಣೆ ಫಲಿತಾಂಶ ಪ್ರಕಟವಾಗುವ ಮೊದಲೇ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕ್ವಿಂಟಲ್‌ ರಾಶಿ ಅಡಕೆಗೆ ಸುಮಾರು .3ರಿಂದ .4 ಸಾವಿರ ಏರಿಕೆಯಾಗಿದೆ.

ದರ ಕುಸಿತದಿಂದ ಕಂಗಾಲಾಗಿದ್ದ ರೈತರಲ್ಲಿ ಅಡಕೆಗೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ದರ ಬರಬಹುದೆಂಬ ಆಶಾ ಭಾವನೆ ಚಿಗುರೊಡೆದಿದೆ. ಮೂರು ದಿನಗಳಲ್ಲಿ ಶಿರಸಿ ಹಾಗೂ ಯಲ್ಲಾಪುರ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ರಾಶಿ ಅಡಕೆಗೆ ಸುಮಾರು .4 ಸಾವಿರದ ವರೆಗೆ ದರ ಏರಿಕೆಯಾಗಿದೆ. 

ಈ ಮೊದಲು ರಾಶಿ ಅಡಕೆಗೆ ಕ್ವಿಂಟಲ್‌ಗೆ ಸರಾಸರಿ ದರ .28 ಸಾವಿರ ಲಭಿಸುತ್ತಿತ್ತು. ಗುಣಮಟ್ಟದ ಅಡಕೆಗೆ ಎರಡು ಸಾವಿರ ಹೆಚ್ಚು ಸಿಗುತ್ತಿತ್ತು. ಈಗ ಈ ದರ ಏರಿಕೆಯಾಗುತ್ತಿದ್ದು, ಶಿರಸಿ ಮಾರುಕಟ್ಟೆಯಲ್ಲಿ ಗರಿಷ್ಠ ದರ .32899 ಮತ್ತು .32092 ಸರಾಸರಿ ದರ ಲಭಿಸಿದೆ. ಮುಂದಿನ ಕೆಲ ದಿನಗಳು ರಾಶಿ ಅಡಕೆಯ ದರ ಏರಿಕೆ ಮುಂದುವರಿಯಲಿದೆ ಎಂದು ಮಾರುಕಟ್ಟೆತಜ್ಞರು ವಿಶ್ಲೇಷಿಸಿದ್ದಾರೆ.