ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಗುಂಡಿನ ದಾಳಿ ನಡೆದಿದೆ. ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಗುಂಡಿನ ದಾಳಿಯಲ್ಲಿ  ಇಬ್ಬರು ಯೋಧರು ಹುತಾತ್ಮರಾಗಿದ್ದು, ಮತ್ತೋರ್ವ ಯೋಧ ಗಂಭೀರ ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರ(ಫೆ.12): ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಗುಂಡಿನ ದಾಳಿ ನಡೆದಿದೆ. ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮತ್ತೋರ್ವ ಯೋಧ ಗಂಭೀರ ಗಾಯಗೊಂಡಿದ್ದಾರೆ.

ಬೆಳಗ್ಗೆ ಕುಲ್ಗಾಮ್‌‌ ಜಿಲ್ಲೆಯ ಯರಿಪೋರ್‌ ಬಳಿ ಮನೆಯೊಂದರಲ್ಲಿ ನಾಲ್ವರು ಉಗ್ರರು ಅಡಗಿಕೊಂಡಿದ್ದರು. ವಿಷಯ ತಿಳಿದ ಭದ್ರತಾ ಪಡೆ ಸಿಬ್ಬಂದಿ ಉಗ್ರರ ಬೇಟೆಗೆ ಇಳಿದಿದ್ದರು. ಈ ವೇಳೆ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೊದ್ಲು ಇಬ್ಬರು ಉಗ್ರರನ್ನು ಯೋಧರು ಹಡೆಮುರಿ ಕಟ್ಟಿದ್ದಾರೆ.

ಇದಾದ ಬಳಿಕವೂ ಉಳಿದ ಇಬ್ಬರು ಉಗ್ರರ ಜೊತೆ ಗುಂಡಿನ ಕಾಳಗ ನಡೆದಿದ್ದು, ಇದರಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ.