ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಲ್ಮತ್ಪಾರ ಪ್ರದೇಶದಲ್ಲಿ ನಿನ್ನೆ ರಾತ್ರಿ ನಾಲ್ವರು ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ.
ಶ್ರೀನಗರ (ಮಾ. 21): ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಲ್ಮತ್ಪಾರ ಪ್ರದೇಶದಲ್ಲಿ ನಿನ್ನೆ ರಾತ್ರಿ ನಾಲ್ವರು ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ.
ಹಲ್ಮತ್ಪಾರ ಪ್ರದೇಶದಲ್ಲಿ ಭಯೋತ್ಪಾದಕರ ಗುಂಪು ಅಡಗಿ ಕುಳಿತಿತ್ತು. ಭಯೋತ್ಪಾದಕರ ಮೇಲೆ ಭದ್ರತಾ ಪಡೆ ಎನ್’ಕೌಂಟರ್ ನಡೆಸಿದೆ. ಎನ್’ಕೌಂಟರ್ನಲ್ಲಿ ನಾಲ್ವರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಪೊಲೀಸರು & ಸ್ಪೆಶಲ್ ಆಪರೇಷನ್ ಗ್ರೂಪ್ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಮುಗಿಸಿದೆ.
