ಅವರದು ಚಿಕ್ಕ ಮತ್ತು ಚೊಕ್ಕ ಕುಟುಂಬ. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ವಿಶೇಷ ಅಂದರೆ ಎಲ್ಲರೂ ವಿದ್ಯಾವಂತರು. ಸುಸಂಸ್ಕೃತ ಕುಟುಂಬ. ಆದರೆ, ಆರ್ಥಿಕ ಸಂಕಷ್ಟ ಈ ಕುಟುಂಬವನ್ನು ಸರ್ವನಾಶ ಮಾಡಿದೆ. ನಾಲ್ವರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಇಷ್ಟೇ ಅಲ್ಲ, ನಮ್ಮ ಮೃತದೇಹಗಳನ್ನು ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಲು ಡೆತ್ ನೋಟ್ ಕೂಡ ಬರೆದಿಟ್ಟು ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಕಲಬುರ್ಗಿ(ಜು.16): ಅವರದು ಚಿಕ್ಕ ಮತ್ತು ಚೊಕ್ಕ ಕುಟುಂಬ. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ವಿಶೇಷ ಅಂದರೆ ಎಲ್ಲರೂ ವಿದ್ಯಾವಂತರು. ಸುಸಂಸ್ಕೃತ ಕುಟುಂಬ. ಆದರೆ, ಆರ್ಥಿಕ ಸಂಕಷ್ಟ ಈ ಕುಟುಂಬವನ್ನು ಸರ್ವನಾಶ ಮಾಡಿದೆ. ನಾಲ್ವರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಇಷ್ಟೇ ಅಲ್ಲ, ನಮ್ಮ ಮೃತದೇಹಗಳನ್ನು ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಲು ಡೆತ್ ನೋಟ್ ಕೂಡ ಬರೆದಿಟ್ಟು ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮನೆಯ ಒಂದೇ ಕೋಣೆಯಲ್ಲಿ ಅಪ್ಪ, ಮಗ, ಮಗಳು ನೇಣಿಗೆ ಕೊರಳೊಡ್ಡಿದ್ದಾರೆ. ಪಕ್ಕದ ಅಡುಗೆ ಮನೆಯಲ್ಲಿ ಅಮ್ಮ ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರೆಲ್ಲರೂ ಪರಸ್ಪರ ಮಾತನಾಡಿಕೊಂಡು ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿ ಇದಕ್ಕಾಗಿಯೇ ನಾಲ್ಕು ಹಗ್ಗ ಕೊಂಡು ತಂದಿದ್ದಾರೆ‌. ಬಳಿಕ ತಾವು ವಾಸ ಮಾಡುತ್ತಿದ್ದ ಬಾಡಿಗೆ ಮನೆಯಲ್ಲಿಯೇ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಭಯಾನಕ ಘಟನೆ ನಡೆದಿದ್ದು ಕಲಬುರಗಿ ನಗರದ ಗಾಜೀಪೂರ ಬಡಾವಣೆಯ ಸರಸ್ವತಿ ಗೋದಾಮು ಪ್ರದೇಶದಲ್ಲಿ. 57 ವರ್ಷದ ಮನೆಯ ಯಜಮಾನ ಶ್ರೀಕಾಂತ ಕಮಲಾಪೂರಕರ್ ಮತ್ತು ಈತನ ಪತ್ನಿ 50 ವರ್ಷದ ತನುಶ್ರೀ, 20 ವರ್ಷದ ಮಗ ಚೇತನ ಹಾಗೂ 16 ವರ್ಷದ ಮಗಳು ಸಾಕ್ಷಿ ಮೃತ ದುರ್ದೈವಿಗಳು.

ವಿಶೇಷ ಅಂದರೆ ಇವರೆಲ್ಲರೂ ವಿದ್ಯಾವಂತರು. ಸುಸಂಸ್ಕೃತರು. ಆದರೆ ಆರ್ಥಿಕ ಸಂಕಷ್ಟ ಇವರ ಸಾಮೂಹಿಕ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಶೇರು ವ್ಯವಹಾರ ಮಾಡುತ್ತಿದ್ದ ಶ್ರೀಕಾಂತ ಕಮಲಾಪೂರಕರ್ ಅದರಲ್ಲಿ ಕೈಸುಟ್ಟುಕೊಂಡು ಸಂಕಷ್ಟದಲ್ಲಿದ್ದ. ಇನ್ನು ಹೆಂಡತಿ ತನುಶ್ರೀ ಸಹ ಪದವೀಧರೆ, ಕಲಬುರಗಿಯ ಖಾಸಗಿ ಪೈಪ್ ಮಾರಾಟ ಮಳಿಗೆಯೊಂದರಲ್ಲಿ ಸೂಪರ್ ವೈಜರ್ ಕೆಲಸ ಮಾಡುತ್ತಿದ್ರು. ಇನ್ನು ಮಗ ಚೇತನ ಪದವಿ ಓದುತ್ತಿದ್ದರೆ ಮಗಳು ಸಾಕ್ಷಿ ಕಲಬುರಗಿಯ ಖಾಸಗಿ ಪ್ರೌಢ ಶಾಲೆಯಲ್ಲಿ SSLC ಓದುತ್ತಿದ್ದವಳು. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ನಮ್ಮ ದೇಹಗಳನ್ನ ಮೆಡಿಕಲ್ ಕಾಲೇಜಿಗೆ ದಾನವಾಗಿ ಕೊಡಿ. ನಮ್ಮ ಸಾವಿಗೆ ನಾವೇ ಕಾರಣ ಅಂತ ಬರೆದಿಟ್ಟಿದ್ದಾರೆ.

ಕಳೆದ ಹದಿನಾರು ವರ್ಷಗಳಿಂದ ಇದೇ ಬಡಾವಣೆಯಲ್ಲಿ ವಾಸವಾಗಿದ್ದ ಕಮಲಾಪೂರಕರ್ ಕುಟುಂಬ ನೆರೆ ಹೊರೆ ಯವರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಆದ್ರೆ, ದಿಧೀರ್ ಆತ್ಮಹತ್ಯೆಯ ನಿರ್ಧಾರ ಸುತ್ತಲಿನ ಜನರನ್ನ ಚಕಿತಗೊಳಿಸಿದೆ. ಕೇಸ್​ ಬುಕ್ ಮಾಡಿ​ಕೊಂಡಿರುವ ಬ್ರಹ್ಮಪೂರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ