ನವದೆಹಲಿ: ಎರಡನೇ ಬಾರಿಗೆ ಪ್ರಧಾನ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಜತೆಗೆ 57 ಜನರು ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ಈ ವೇಳೆ ಸಚಿವರಾದ ಸುಷ್ಮಾ ಸ್ವರಾಜ್‌, ಸುರೇಶ್‌ ಪ್ರಭು, ಮನೇಕಾ ಗಾಂಧಿ, ಉಮಾ ಭಾರತಿ, ರಾಜ್ಯವರ್ಧನ್‌ ರಾಥೋರ್‌ ಸೇರಿದಂತೆ ಒಟ್ಟು 36 ಹಳಬರಿಗೆ ಹೊಸ ಸಂಪುಟದಿಂದ ಕೋಕ್‌ ನೀಡಲಾಗಿದೆ.

24 ಕ್ಯಾಬಿನೆಟ್‌ ದರ್ಜೆ ಸಚಿವರು, 9 ಜನ ಸ್ವತಂತ್ರ ಖಾತೆ ಹಾಗೂ 24 ಜನರಿಗೆ ರಾಜ್ಯ ಖಾತೆ ಜವಾಬ್ದಾರಿ ನೀಡಲಾಗಿದೆ. ಪ್ರಸ್ತುತ ಸಂಪುಟದಲ್ಲಿ ಒಟ್ಟು 24 ಹೊಸಬರಿಗೆ ಮಣೆ ಹಾಕಲಾಗಿದೆ.