ಲಿಬಿಯಾದಲ್ಲಿ ಹೋರಾಡುತ್ತಿರುವ ಐಸಿಸ್​​ ಉಗ್ರರಿಗೆ ಅಂತಲೇ ಸುಮಾರು 482 ಕೋಟಿ ರೂಪಾಯಿ ಮೌಲ್ಯದ 37 ಮಿಲಿಯನ್ ಟ್ರಮಡೋಲ್​​ ಮಾತ್ರೆಗಳನ್ನು ಭಾರತದಿಂದ ಸಾಗಿಸಲಾಗಿತ್ತು. ಮೂರು ಕಂಟೇನರ್​ಗಳಲ್ಲಿ ಮಾತ್ರೆಗಳನ್ನು ಪ್ಯಾಕ್​  ಮಾಡಿ ಕಂಟೇನರ್​​ಗೆ ಹೊದಿಕೆ ಮತ್ತು ಶಾಂಪೂ ಅನ್ನೋ ಲೇಬಲ್​​ ಅಂಟಿಸಲಾಗಿತ್ತು

ಇರಾಕ್​, ಸಿರಿಯಾದಂತಹ ದೇಶಗಳಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಐಸಿಸ್​ ಉಗ್ರರಿಗೆ ಭಾರತದಿಂದ ನೋವು ನಿವಾರಕ ಮಾತ್ರೆ ಪೂರೈಕೆಯಾಗುತ್ತಿರುವ ಕಳವಳಕಾರಿ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಲಿಬಿಯಾದಲ್ಲಿ ಹೋರಾಡುತ್ತಿರುವ ಐಸಿಸ್​​ ಉಗ್ರರಿಗೆ ಅಂತಲೇ ಸುಮಾರು 482 ಕೋಟಿ ರೂಪಾಯಿ ಮೌಲ್ಯದ 37 ಮಿಲಿಯನ್ ಟ್ರಮಡೋಲ್​​ ಮಾತ್ರೆಗಳನ್ನು ಭಾರತದಿಂದ ಸಾಗಿಸಲಾಗಿತ್ತು. ಮೂರು ಕಂಟೇನರ್​ಗಳಲ್ಲಿ ಮಾತ್ರೆಗಳನ್ನು ಪ್ಯಾಕ್​ ಮಾಡಿ ಕಂಟೇನರ್​​ಗೆ ಹೊದಿಕೆ ಮತ್ತು ಶಾಂಪೂ ಅನ್ನೋ ಲೇಬಲ್​​ ಅಂಟಿಸಲಾಗಿತ್ತು. ಲಿಬಿಯಾದ ಮಿಸ್ರಾಟಾ ಹಾಗೂ ತೊಬ್ರುಕ್​​ಗೆ ಸಾಗುತ್ತಿದ್ದ ಸರಕು ಸಾಗಣೆ ಹಡಗಿಗೆ ಇದನ್ನು ತುಂಬಲು ಉದ್ದೇಶಿಸಲಾಗಿತ್ತು. ಅಷ್ಟರಲ್ಲಿಯೇ ಇಟಲಿ ಪೊಲೀಸರು ಜಿನೋವಾ ಬಂದರಿನಲ್ಲಿ ದಾಳಿ ಮಾಡಿ ಪೇಯ್ನ್ ಕಿಲ್ಲರ್​ ಮಾತ್ರೆಗಳನ್ನು ಜಪ್ತಿ ಮಾಡಿದ್ದಾರೆ.

ಏನಿದುಟ್ರಮಡೋಲ್​​ ಮಾತ್ರೆ?

ಟ್ರಮಡೋಲ್​​ ಮಾತ್ರೆ ಒಂದು ನೋವು ನಿವಾರಕ ಔಷಧ. ಈ ಮಾತ್ರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇದನ್ನು ಬಳಸುತ್ತಾರೆ. ಈ ಮಾತ್ರೆ ಮಧ್ಯಮ ಅಥವಾ ತೀವ್ರ ತೆರನಾದ ನೋವು ನಿವಾರಕ ಗುಳಿಗೆಯಾಗಿದೆ. ಸದಾ ಸಂಘರ್ಷದಿಂದ ತೊಡಗಿ ಒಂದಿಲ್ಲೊಂದು ರೀತಿಯಲ್ಲಿ ಘಾಸಿಗೊಳ್ಳುವ ಐಸಿಸ್​ ಉಗ್ರರು ಈ ಮಾತ್ರೆ ನಿತ್ಯ ಸೇವಿಸುತ್ತಾರೆ. ಈ ಮಾತ್ರೆಗೆ ಲಿಬಿಯಾ ಮತ್ತು ಸಿರಿಯಾದಲ್ಲಿ ಭಾರೀ ಬೇಡಿಕೆಯಿದೆ. ಹೀಗಾಗಿ ಕಡಿಮೆ ಬೆಲೆಗೆ ಭಾರತದಲ್ಲಿ ಸಿಗುವ ಟ್ರಮಡೋಲ್​​ ಮಾತ್ರೆ ಮೇಲೆ ISIS ಕಣ್ಣು ಬಿದ್ದಿದ್ದು, ಹಲವು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಂಡಿದೆ.

ಇಟಲಿ ಪೊಲೀಸರು ಜಪ್ತಿ ಮಾಡಿರುವ ಟ್ರಮಡೋಲ್​ ಮಾತ್ರೆಯ ಮೂಲ ಭಾರತೀಯ ಔಷಧ ಕಂಪನಿಯದ್ದಾಗಿದೆ. ದುಬೈ ಮೂಲದ ಆಮದುದಾರನೊಬ್ಬ ಭಾರೀ ಪ್ರಮಾಣದಲ್ಲಿ ಮಾತ್ರೆಗಳನ್ನ ಖರೀದಿಸಿರೋದು ಅಂತ ತಿಳಿದು ಬಂದಿದೆ. ಟ್ಯಾಬ್ಲೆಟ್ ತುಂಬಿದ್ದ 3 ಕಂಟೇನರ್​ಗಳು ಭಾರತದಿಂದ ಶ್ರೀಲಂಕಾಗೆ ಹಡಗಿನ ಮೂಲಕ ತಲುಪಿದ್ದವು.

ಜಿಹಾದ್​​​​ ಹೆಸರಲ್ಲಿ ISIS ಉಗ್ರರು ನಡೆಸುತ್ತಿರುವ ಹೋರಾಟಕ್ಕೆ ಹಲವರು ನೀರೆರೆದು ಪೋಷಿಸುತ್ತಿರೋದು ಸ್ಪಷ್ಟವಾಗಿದೆ. ಸದ್ಯ ಇಟಲಿ ಪೊಲೀಸರು ಮಾತ್ರೆಗಳನ್ನ ಜಪ್ತಿ ಮಾಡಿ ವಿಶ್ವಸಂಸ್ಥೆಗೆ ದೂರು ನೀಡಿ ತನಿಖೆ ಚುರುಕುಗೊಳಿಸಿದೆ.

(ಸಾಂಧರ್ಭಿಕ ಚಿತ್ರ)

ವರದಿ: ಜೆ. ಎಸ್​. ಪೂಜಾರ್​, ಸುವರ್ಣನ್ಯೂಸ್​