ನವದೆಹಲಿ[ಮೇ.25]: 17ನೇ ಲೋಕಸಭಾ ಚುನಾವಣೆಯ ಎಲ್ಲಾ 542 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು, ಇವುಗಳಲ್ಲಿ 303 ಸ್ಥಾನಗಳು ಬಿಜೆಪಿ ಪಾಲಾಗಿವೆ. ನೂತನ ಲೋಕಸಭೆಗೆ ಪ್ರವೇಶಿಸುತ್ತಿರುವ ಸಂಸದರಲ್ಲಿ 300 ಮಂದಿ ಇದೇ ಮೊದಲ ಬಾರಿ ಸಂಸತ್ತಿನ ಕೆಳಮನೆ ಪ್ರವೇಶಿಸುತ್ತಿದ್ದಾರೆ. ಇವರಲ್ಲಿ ಕರ್ನಾಟಕದಿಂದ ಸುಮಲತಾ, ತೇಜಸ್ವಿ ಸೂರ್ಯ ಸೇರಿದಂತೆ ಒಟ್ಟು 10 ಮಂದಿ ಹೊಸ ಮುಖಗಳು. ಇನ್ನುಳಿದಂತೆ ಗೌತಮ್ ಗಂಭೀರ್, ಸ್ಮೃತಿ ಇರಾನಿಯಂತಹ ಭಾರೀ ಸದ್ದು ಮಾಡಿದ ಅಭ್ಯರ್ಥಿಗಳಿದ್ದಾರೆ.

ಲೋಕಸಭೆಗೆ ಈ ಬಾರಿ 27 ಮುಸ್ಲಿಂ ಸದಸ್ಯರ ಆಯ್ಕೆ, 2014ಕ್ಕಿಂತ 4 ಅಧಿಕ

ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸುಮಾರು 55,120 ಮತಗಳಿಂದ ಸೋಲಿಸಿದ್ದಾರೆ. ಎರಡು ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಸ್ಮೃತಿ ಇರಾನಿ ಇದಕ್ಕೂ ಮೊದಲು 2004 ಹಾಗೂ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಇನ್ನು ಅತ್ಯಂತ ಅನುಭವಿ ಸಂಸದರು ಯಾರು ಎಂದು ಗಮನಿಸುವುದಾದರೆ ಸಂತೋಷ್ ಗಂಗಾವರ್ ಹಾಗೂ ಮನೇಕಾ ಗಾಂಧಿ 8 ಬಾರಿ ಲೋಕಸಭೆಗೆ ಪ್ರವೇಶಿಸುವ ಮೂಲಕ ಮೊದಲ ಸ್ಥಾನ ಪಡೆಯುತ್ತಾರೆ.

ಶೇ. 12ರಷ್ಟು ಸಂಸದರು 40 ವರ್ಷಕ್ಕೂ ಕಡಿಮೆ ವಯಸ್ಸಿನವರು

ಈ ಬಾರಿ ಗೆದ್ದು ಲೋಕಸಭೆ ಪ್ರವೇಶಿಸಲು ಸಜ್ಜಾದವರಲ್ಲಿ ಶೇ. 12ರಷ್ಟು ಸಂಸದರು 40 ವರ್ಷಕ್ಕೂ ಕಡಿಮೆ ವಯಸ್ಸಿನವರು. ಕಳೆದ ಬಾರಿ ಅಂದರೆ 2014ರಲ್ಲಿ ಆಯ್ಕೆಯಾದವರಲ್ಲಿ ಕೇವಲ ಶೇ. 12ರಷ್ಟು ಮಂದಿ 40ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದರು. 

ಅಬ್ಬಬ್ಬಾ... ಈ ಲೋಕಸಭೆಯಲ್ಲಿ ಎಷ್ಟೊಂದು ಮಹಿಳಾ ಸದಸ್ಯರು!

ಇತಿಹಾಸದಲ್ಲಿ ಇದೇ ಮೊದಲ ಬಾರಿ ಅತಿ ಹೆಚ್ಚು ಮಹಿಳಾ ಸಂಸದರು

17ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಲ್ಲಿ ಒಟ್ಟು 78 ಮಂದಿ ಮಹಿಳೆಯರಿದ್ದಾರೆ. ಈ ಮೂಲಕ ಒಟ್ಟು ಸಂಸದರದಲ್ಲಿ ಶೇ. 17ರಷ್ಟು ಮಹಿಳಾ ಎಂಪಿಗಳು ಲೋಕಸಭೆಯಲ್ಲಿ ಜನರ ಧ್ವನಿಯಾಗಲಿದ್ದಾರೆ. ಮಂಡ್ಯದಿಂದ ಗೆದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕೂಡಾ ಇದ್ದಾರೆ.

ಚಿತ್ರಗಳಲ್ಲಿ: ಕರ್ನಾಟಕದಿಂದ ಲೋಕಸಭೆ ಪ್ರವೇಶಿಸಿದ 10 ಹೊಸ ಮುಖಗಳು

ನೂತನ ಸಂಸದರ ಪೈಕಿ 394 ಮಂದಿ ಪದವೀಧರರು!

ಲೋಕಸಭೆಗೆ ಪ್ರವೇಶಿಸುತ್ತಿರುವ ಸಂಸದರ ಪೈಕಿ ಒಟ್ಟು 394 ಮಂದಿ ಪದವೀಧರರು. ಒಟ್ಟು ಸಂಸದರದಲ್ಲಿ ಶೇ. 43ರಷ್ಟು ಮಂದಿ ಪಧವೀದರರಾಗಿದ್ದರೆ, ಶೇ. 25ರಷ್ಟು ಸ್ನಾತಕೋತ್ತರ ಪಧವೀದರರು ಹಾಗೂ ಶೇ. 4ರಷ್ಟು ಸಂಸದರು PhD ಗಳಿಸಿದ್ದಾರೆ.

ಕುಟುಂಬ ರಾಜಕಾರಣದ ಕತೆ ಏನಾಯ್ತು? ಇಲ್ಲಿದೆ 13 ಕುಟುಂಬಗಳ ಕತೆ...!

ದಾಖಲೆ ಮತಗಳಲ್ಲಿ ಗೆದ್ದವರ ಸಂಖ್ಯೆಯೂ ಏರಿಕೆ

ದಾಖಲೆ ಮತಗಳ ಅಂತರದಲ್ಲಿ ಗೆದ್ದ ಅಭ್ಯರ್ಥಿಗಳ ಸಂಖ್ಯೆಯೂ ಏರಿಕೆಯಾಗಿದೆ. ಇದೇ ಮೊದಲ ಬಾರಿ ನಾಳ್ವರು ಅಭ್ಯರ್ಥಿಗಳು 6 ಲಕ್ಷ ಮತಗಳ ಅಂತರದಿಂದ ಲೋಕ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಇನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಸುಮಾರು 12 ಮಂದಿ ಅಭ್ಯರ್ಥಿಗಳ ಗೆಲುವಿನ ಅಂತರ 5 ಲಕ್ಷಕ್ಕೂ ಅಧಿಕವಿದೆ. ದಾಖಲೆ ಮತಗಳ ಅಂತರದಲ್ಲಿ ಗೆದ್ದ 16 ಅಭ್ಯರ್ಥಿಗಳಲ್ಲಿ 14 ಮಂದಿ ಬಿಜೆಪಿ ನಾಯಕರು.