ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ  ಮೂವರು ಕಾರ್ಮಿಕರು ಇಂದು ಖಾಸಗಿ ಅಪಾರ್ಟ್'ಮೆಂಟ್'ನ ಮ್ಯಾನ್ ಹೋಲ್ ಸ್ವಚ್ಛ'ಗೊಳಿಸಲು ತೆರಳಿದ್ದರು.

ಬೆಂಗಳೂರು(ಜ.07): ಮ್ಯಾನ್ ಹೋಲ್ ಮತ್ತೆ ಮೂವರನ್ನು ಬಲಿತೆಗೆದುಕೊಂಡಿದೆ. ಮ್ಯಾನ್ ಹೋಲ್'ಗೆ ಬಿದ್ದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಎಚ್ ಎಸ್ ಅರ್ ಲೇಔಟ್ ನ 2ನೇ ಸೆಕ್ಟರ್'ನ ಸೋಮಸುಂದರಪಾಳ್ಯದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಇಂದು ಖಾಸಗಿ ಅಪಾರ್ಟ್'ಮೆಂಟ್'ನ ಮ್ಯಾನ್ ಹೋಲ್ ಸ್ವಚ್ಛ'ಗೊಳಿಸಲು ತೆರಳಿದ್ದರು. ಸುಮಾರು 15ರಿಂದ 20ಅಡಿಯಿದ್ದ ಮ್ಯಾನ್ ಹೋಲ್'ಗೆ ಇಳಿದಿದ್ದ ಇವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.