ಐಎಸ್‌ಐ ಬೆಂಬಲಿತ ಸಂಘಟನೆಯಾಗಿರುವ ಅಂತಾರಾಷ್ಟ್ರೀಯ ಸಿಖ್‌ ಯುವ ಒಕ್ಕೂಟ (ಐಎಸ್‌ವೈಎಫ್‌)ದ ಜತೆ ನೇರ ಸಂಪರ್ಕ ಹೊಂದಿರುವ ಗುರುದಯಾಳ್‌ ಸಿಂಗ್‌, ಜಗ ರೂಪ್‌ ಸಿಂಗ್‌ ಹಾಗೂ ಸತ್ವಿಂದರ್‌ ಸಿಂಗ್‌ ಬಂಧಿತರು.

ಚಂಡೀಗಢ: ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ತರಬೇತಿ ನೀಡಿ ಸಜ್ಜುಗೊಳಿಸಿದ್ದ ಮೂವರು ವ್ಯಕ್ತಿಗಳನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ.

ಐಎಸ್‌ಐ ಬೆಂಬಲಿತ ಸಂಘಟನೆಯಾಗಿರುವ ಅಂತಾರಾಷ್ಟ್ರೀಯ ಸಿಖ್‌ ಯುವ ಒಕ್ಕೂಟ (ಐಎಸ್‌ವೈಎಫ್‌)ದ ಜತೆ ನೇರ ಸಂಪರ್ಕ ಹೊಂದಿರುವ ಗುರುದಯಾಳ್‌ ಸಿಂಗ್‌, ಜಗ ರೂಪ್‌ ಸಿಂಗ್‌ ಹಾಗೂ ಸತ್ವಿಂದರ್‌ ಸಿಂಗ್‌ ಬಂಧಿತರು.

ಪಾಕಿಸ್ತಾನದಲ್ಲಿ ನೆಲೆಸಿರುವ ಐಎಸ್‌ಐಎಫ್‌ ಮುಖ್ಯಸ್ಥ ಲಖ್‌ಬೀರ್‌ ರೋಡ್‌ ಸೂಚನೆಗೆ ಮೇರೆಗೆ ಕೆಲವೊಂದು ವ್ಯಕ್ತಿಗಳ ಮೇಲೆ ದಾಳಿಗೆ ಇವರೆಲ್ಲಾ ಸಂಚು ರೂಪಿಸಿದ್ದರು ಎನ್ನಲಾಗಿದೆ.