ಕೋಲ್ಕತ್ತಾ(ಜು.23): ಮಹಿಳೆಯೋರ್ವಳು ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ತಾನೇ ಮಗುವಿನ ನಿಜವಾದ ತಂದೆ ಎಂದು ಮೂವರು ವ್ಯಕ್ತಿಗಳು ಪ್ರತಿಪಾದಿಸಿದ ವಿಚಿತ್ರ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೋರ್ವಳು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಈ ವೇಳೆ ಮಗುವಿನ ನೈಜ ತಂದೆ ಎಂದು ಮೂವರು ವ್ಯಕ್ತಿಗಳು ಪ್ರತಿಪಾದಿಸಿದ್ದಾರೆ.

ಇದರಿಂದ ಗೊಂದಲಕ್ಕೀಡಾದ IRIS ಆಸ್ಪತ್ರೆ ಸಿಬ್ಬಂದಿ, ಪೊಲೀಸರನ್ನು ಸಂಪರ್ಕಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಹಿಳೆಯನ್ನು ಸಂಪರ್ಕಿಸಿ ನೈಜ ತಂದೆಯ ಕುರಿತು ಮಾಹಿತಿ ಪಡೆದಿದ್ದಾರೆ.

 ಇಷ್ಟೇ ಅಲ್ಲದೇ ಮಹಿಳೆಯ ಮದುವೆ ದಾಖಲಾತಿಗಳನ್ನು ಪರಿಶೀಲಿಸಿದ ಪೊಲೀಸರು, ನೈಜ ಗಂಡನನ್ನು ಗುರಿತಿಸಿ ಉಳಿದಿಬ್ಬರನ್ನು ವಂಚನೆ ಮಾಡುವ ಉದ್ದೇಶದ ಆರೋಪದ ಮೇಲೆ ಬಂಧಿಸಿದ್ದಾರೆ.