ವೇಶ್ಯಾವಾಟಿಕೆ ಜಾಲಕ್ಕೆ ಯುವತಿಯರ ಕಳ್ಳಸಾಗಣೆ : ಮೂವರು ಮಹಿಳೆಯರ ಬಂಧನ

First Published 17, Jan 2018, 11:48 AM IST
3 Ladies Arrested
Highlights

ಅಂತರಾಜ್ಯ ವೇಶ್ಯಾವಾಟಿಕೆ ಜಾಲಕ್ಕೆ ಯುವತಿಯರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಬಂಧಿಸಲಾಗಿದೆ.

ತುಮಕೂರು (ಜ.17): ಅಂತರಾಜ್ಯ ವೇಶ್ಯಾವಾಟಿಕೆ ಜಾಲಕ್ಕೆ ಯುವತಿಯರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಬಂಧಿಸಲಾಗಿದೆ.

ತುಮಕೂರು ಜಿಲ್ಲೆ ಹಾಗೂ ಕೊರಟಗೆರೆ ತಾಲೂಕಿನಿಂದ ದೆಹಲಿಗೆ  ಯುವತಿಯರನ್ನು ಕಳ್ಳ ಸಾಗಣೆ ನಡೆಸುತ್ತಿದ್ದರು ಎಂದು ಕೊರಟಗೆರೆ ಪೊಲೀಸರು ಮಾಹಿತಿ ನೀಡಿದ್ದಾರೆ.

 ಈ ಸಂಬಂಧ ಕೊರಟಗೆರೆ ಉಪನಿರೀಕ್ಷಕ ಪೊಲೀಸರ ತಂಡವು ಮೂವರು ಮಹಿಳೆಯರನ್ನು ಬಂಧಿಸಿದೆ. ಕೊರಟಗೆರೆ ಪಟ್ಟಣದ ಹನುಮಂತಪುರದ ಗೌಡನಕೆರೆಯ ಭಾಗ್ಯಮ್ಮ, ಮಧುಗಿರಿಯ ಗರಣಿ ಹೊಸಕೋಟೆಯ  ಭಾಗ್ಯಮ್ಮ, ನೂರ್ ಜಾನ್ ಎಂಬ ಮೂವರ ಬಂಧನವಾಗಿದೆ.

ಇಲ್ಲಿನ ಸುತ್ತಮುತ್ತಲ ಪ್ರದೇಶಗಳಿಂದ ಯುವತಿಯರನ್ನು ದೆಹಲಿಗೆ ಕಳ್ಳಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನು ವಂಚಿಸಿ ಕರೆದೊಯ್ದು  ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡುತ್ತಿದ್ದರು. ಓರ್ವ ಯುವತಿಗೆ 3 ರಿಂದ 8 ಸಾವಿರದವರೆಗೂ ಕೂಡ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

loader