ಪಣಜಿ [ಜು.13] :  ಕಾಂಗ್ರೆಸ್ಸಿನ 10 ಶಾಸಕರು ಬಿಜೆಪಿಗೆ ಜಿಗಿದ ಬೆನ್ನಲ್ಲೇ, ಅವರಿಗೆ ಸಚಿವ ಹುದ್ದೆ ನೀಡಲು ಇಲ್ಲಿನ ಸರ್ಕಾರ ಸಜ್ಜಾಗಿದೆ. 

ಸರ್ಕಾರವನ್ನೇ ಅಸ್ಥಿರಗೊಳಿಸುವ ಬೆದರಿಕೆಯೊಡ್ಡುತ್ತಿದ್ದ ಓರ್ವ ಸ್ವತಂತ್ರ ಶಾಸಕ ಹಾಗೂ ಗೋವಾ ಫಾರ್ವರ್ಡ್‌ ಮೂವರು ಸಚಿವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸೂಚಿಸಿದ್ದು, ಇವರ ಸ್ಥಾನವನ್ನು ಪಕ್ಷಾಂತರ ಮಾಡಿದ ಮೂವರಿಗೆ ನೀಡಲಾಗುತ್ತಿದೆ. 

ಡಿಸಿಎಂ ಸೇರಿ ನಾಲ್ವರಿಗೆ ರಾಜೀನಾಮೆ ನೀಡಲು ಗೋವಾ ಸಿಎಂ ಸೂಚನೆ

ಗೋವಾ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದ ಚಂದ್ರಕಾಂತ್‌ ಕವ್ಲೇಕರ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತಿದೆ. 

ಜೆನಿಫರ್ ಮಾನ್ಸರೆಟ್ಟೊ ಹಾಗೂ, ಫಿಲಿಪ್ ನೆರಿ ರೋಡ್ರಿಗಸ್ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಮೂವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ.