ಭಾರತಿ(38) ರಮೇಶ್ (42), ಜಗದೀಶ್(46) ಮೃತರು. ಎಲ್ಲರೂ ಮಾಗಡಿ ರಸ್ತೆ ಬಳಿಯ ಸುಮನಹಳ್ಳಿ ನಿವಾಸಿಗಳಾಗಿದ್ದಾರೆ. ಐವರು ಕೆಎ 02 ಎನ್ 0771 ಎಸ್ಟೀಮ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಜೆಸಿ ರಸ್ತೆಯ ಬಳಿ ದೊಡ್ಡ ಮರ ಬಿದ್ದ ಪರಿಣಾಮ ಸ್ಥಳದಲ್ಲಿ ಮೂವರು ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬಗ್ಗೆ ಸ್ವತಃ ಸ್ಥಳಿಯ ಶಾಸಕ ಆರ್.ವಿ. ದೇವರಾಜ್ ಸುವರ್ಣ ನ್ಯೂಸ್'ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುರಿದ ಮಳೆಗೆ ಮೂವರು ಮೃತಪಟ್ಟು ಒಬ್ಬ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಜೆಸಿ ರಸ್ತೆಯ ಬಳಿ ಮರ ಕಾರ್ ಮೇಲೆ ಬಿದ್ದ ಪರಿಣಾಮ ದಂಪತಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಭಾರತಿ(38) ರಮೇಶ್ (42), ಜಗದೀಶ್(46) ಮೃತರು. ಎಲ್ಲರೂ ಮಾಗಡಿ ರಸ್ತೆ ಬಳಿಯ ಸುಮನಹಳ್ಳಿ ನಿವಾಸಿಗಳಾಗಿದ್ದಾರೆ. ಐವರು ಕೆಎ 02 ಎನ್ 0771 ಎಸ್ಟೀಮ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಜೆಸಿ ರಸ್ತೆಯ ಬಳಿ ದೊಡ್ಡ ಮರ ಬಿದ್ದ ಪರಿಣಾಮ ಸ್ಥಳದಲ್ಲಿ ಮೂವರು ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬಗ್ಗೆ ಸ್ವತಃ ಸ್ಥಳಿಯ ಶಾಸಕ ಆರ್.ವಿ. ದೇವರಾಜ್ ಸುವರ್ಣ ನ್ಯೂಸ್'ಗೆ ಮಾಹಿತಿ ನೀಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ಡ್ರೈನೇಜ್ 'ನ ಸ್ಲ್ಯಾಬ್ ಬಿದ್ದ ಪರಿಣಾಮ ವಯ್ಯಾಲಿ ಕಾವಲ್ ನಿವಾಸಿ ವರುಣ್(18) ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸ್ಥಳಕ್ಕೆ ಮೇಯರ್ ಜಿ.ಪದ್ಮಾವತಿ ಭೇಟಿ ನೀಡಿದ್ದಾರೆ. ನಗರಾದಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದ್ದು 15 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಅಂಡರ್'ಪಾಸ್ ರಸ್ತೆಗಳಲ್ಲಿ ನಾಲ್ಕೈದು ಅಡಿಗಳವರೆಗೂ ನೀರು ನಿಂತಿದೆ.
1 ಗಂಟೆಯಿಂದ ಸುರಿದ ಮಳೆ ಹಲವೆಡೆ ಜಲಾವೃತ
ಬಸವನಗುಡಿ, ಹನುಮಂತನಗರ, ಜೆಸಿ ರಸ್ತೆ, ಜೆಪಿ ಪಾರ್ಕ್, ಅಜಾದ್ ನಗರ, ಸೇರಿ ಹಲವೆಡೆ ಮರಗಳು ಧರೆಗುರುಳಿವೆ. ಬಹುತೇಕ ಕಡೆಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ರಸ್ತೆಗಳು ಜಲಾವೃತವಾಗಿ ನದಿಯಂತಾಗಿವೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಮನೆ ತಲುಪಲು ಹರಸಾಹಸ ಪಡುತ್ತಿದ್ದಾರೆ.ಕಳೆದ 1 ಗಂಟೆಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ ಇನ್ನು 2 ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಶೇಷಾದ್ರಿಪುರಂ, ಮಲ್ಲೇಶ್ವರಂ,ಮೇಖ್ರಿ ಸರ್ಕಲ್, ಹೆಬ್ಬಾಳ, ಕೊಡಿಗೆಹಳ್ಳಿ ಗೇಟ್, ಯಲಹಂಕ,ಕೆ.ಆರ್.ಸರ್ಕಲ್, ಚಾಮರಾಜಪೇಟೆ, ಕೆ.ಆರ್.ಮಾರ್ಕೆಟ್, ರಾಜಾಜಿನಗರ, ವಿಜಯನಗರ, ಮಾಗಡಿರಸ್ತೆ, ಕಾಮಾಕ್ಷಿಪಾಳ್ಯ,ಬಸವನಗುಡಿ, ವಿಧಾನಸೌಧ, ಶಿವಾಜಿನಗರ, ಬಸವೇಶ್ವರ ನಗರ,ಕೆ.ಆರ್.ಸರ್ಕಲ್, ಕಾರ್ಪೋರೇಷನ್, ಕೆ.ಆರ್.ಮಾರ್ಕೆಟ್, ಎಚ್ಎಸ್ಆರ್ ಲೇಔಟ್, ಹೊಸೂರು ರಸ್ತೆ, ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ