Asianet Suvarna News Asianet Suvarna News

ಜನರಿಗೊಂದು ಕಾನೂನು, ಸರ್ಕಾರಕ್ಕೊಂದು ಕಾನೂನು: 29 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಕಚೇರಿಗಳು

ಸಾಮಾನ್ಯವಾಗಿ ಎರಡು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲಾ ಅಂದರೆ ಕನೆಕ್ಷನ್ ಕಟ್ ಮಾಡುವ ಮೆಸ್ಕಾಂ ಅಧಿಕಾರಿಗಳು. ಸರ್ಕಾರಿ ಇಲಾಖೆಗೆಗಳಿಗೆ ಮಾತ್ರ ಈ ನಿಯಮ ಪಾಲನೇ ಮಾಡುವುದಿಲ್ಲ. ಹೌದು, ಇದಕ್ಕೆ ಸಾಕ್ಷಿ ಚಿಕ್ಕಮಗಳೂರಿನ ಸರ್ಕಾರಿ ಕಚೇರಿಗಳು. ಅಧಿಕಾರಿಗಳ ಈ ಬೇಜಾವಾಬ್ದಾರಿಯಿಂದ ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ ಬಿಲ್ ಮೊತ್ತ ಬರೋಬ್ಬರಿ 29 ಕೋಟಿ.

29 Crore Power Bill of Chikkamagaluru Govt Office
  • Facebook
  • Twitter
  • Whatsapp

ಚಿಕ್ಕಮಗಳೂರು(ಜೂ.16): ಸಾಮಾನ್ಯವಾಗಿ ಎರಡು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲಾ ಅಂದರೆ ಕನೆಕ್ಷನ್ ಕಟ್ ಮಾಡುವ ಮೆಸ್ಕಾಂ ಅಧಿಕಾರಿಗಳು. ಸರ್ಕಾರಿ ಇಲಾಖೆಗೆಗಳಿಗೆ ಮಾತ್ರ ಈ ನಿಯಮ ಪಾಲನೇ ಮಾಡುವುದಿಲ್ಲ. ಹೌದು, ಇದಕ್ಕೆ ಸಾಕ್ಷಿ ಚಿಕ್ಕಮಗಳೂರಿನ ಸರ್ಕಾರಿ ಕಚೇರಿಗಳು. ಅಧಿಕಾರಿಗಳ ಈ ಬೇಜಾವಾಬ್ದಾರಿಯಿಂದ ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ ಬಿಲ್ ಮೊತ್ತ ಬರೋಬ್ಬರಿ 29 ಕೋಟಿ.

ಕಳೆದ ಐದಾರು ವರ್ಷಗಳಿಂದ ಸರಿಯಾಗಿ ಬಿಲ್ ಪಾವತಿಸದ ಕಾರಣ ಬರೋಬರಿ 29 ಕೋಟಿ ಬಿಲ್ ಬಾಕಿ ಉಳಿದಿದೆ. ಜಿಲ್ಲೆಯ 224 ಗ್ರಾಮ ಪಂಚಾಯಿತಿಗಳಲ್ಲಿ  ಸುಮಾರು 26 ಕೋಟಿ,  ನಗರಸಭೆ, ಪುರಸಭೆಗಳಲ್ಲಿ 2 ಕೋಟಿ,  ಪೊಲೀಸ್ ಇಲಾಖೆ, ಅರಣ್ಯ ಇಲಾಖೆ , ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಒಳಗೊಂಡತ್ತೆ ಒಟ್ಟು 29 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿದಿರುವುದು ಮೆಸ್ಕಾಂ ಅಧಿಕಾರಿಗಳಿಗೆ ತಲೆನೋವಾಗಿದೆ.

ಸರ್ಕಾರಿ ಇಲಾಖೆಗಳಲ್ಲಿ ಶೇಕಡಾ 60 ರಷ್ಟು ಹಣ ವಿದ್ಯುತ್ ಬಿಲ್ ಗಾಗಿ ಮೀಸಲಿದ್ದರೂ, ಸರ್ಕಾರಿ ಕಚೇರಿಗಳ ನಿರ್ಲಕ್ಷ್ಯದಿಂದ ಕೋಟಿಗಟ್ಟಲೇ ಬಿಲ್ ಬಾಕಿ ಉಳಿದಿದೆ.

ಒಟ್ಟಾರೆ ಸಾರ್ವಜನಿಕರು ಬಿಲ್ ಪಾವತಿ ಮಾಡದಿದ್ದರೆ ಹೇಳದೆ ಕೇಳದೆ ವಿದ್ಯುತ್ ಕನೆಕ್ಷನ್ ಕಟ್ ಮಾಡುವ ಮೆಸ್ಕಾಂ ಅಧಿಕಾರಿಗಳು  ಸರ್ಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Follow Us:
Download App:
  • android
  • ios