ನವದೆಹಲಿ[ಜ.05]: ಕಳೆದ 5 ವರ್ಷದಲ್ಲಿ ಸಾಲ ಬಾಕಿ ಉಳಿಸಿಕೊಂಡ ಮತ್ತು ಆರ್ಥಿಕ ಅಪರಾಧಿ ಪಟ್ಟಹೊತ್ತ 27 ಉದ್ಯಮಿಗಳು ದೇಶದಿಂದ ಪರಾರಿಯಾಗಿದ್ದಾರೆ.

ಈ ಪೈಕಿ 20 ಜನರ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌ ಜಾರಿಗೆ ಈಗಾಗಲೇ ಇಂಟರ್‌ ಪೋಲ್‌ ಸಂಪರ್ಕ ಮಾಡಲಾಗಿದೆ.

ಇವರಲ್ಲಿ 8 ಜನರ ವಿರುದ್ಧ ಈಗಾಗಲೇ ಇಂಟರ್‌ಪೋರ್ಟ್‌ ನೋಟಿಸ್‌ ಕೂಡಾ ಜಾರಿ ಮಾಡಲಾಗಿದೆ. 6 ಆರ್ಥಿಕ ಅಪರಾಧಿಗಳ ಗಡಿಪಾರಿಗೆ ಸರ್ಕಾರ ವಿವಿಧ ದೇಶಗಳಿಗೆ ಮನವಿ ಕೂಡಾ ಮಾಡಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವಪ್ರತಾಪ್‌ ಶುಕ್ಲಾ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.