ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅಪ್ಪಳಿಸಿದ ಧೂಳಿನ ಬಿರುಗಾಳಿ ಮತ್ತು ಮಿಂಚಿಗೆ 26 ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿಯಿಂದ ಆರಂಭವಾಗಿರುವ ಧೂಳಿನ ಬಿರುಗಾಳಿ ಮತ್ತು ಮಿಂಚಿನಿಂದಾಗಿ ರಾಜ್ಯದ 11 ಜಿಲ್ಲೆಗಳು ತತ್ತರಿಸಿವೆ. 

ಲಖನೌ: ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅಪ್ಪಳಿಸಿದ ಧೂಳಿನ ಬಿರುಗಾಳಿ ಮತ್ತು ಮಿಂಚಿಗೆ 26 ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿಯಿಂದ ಆರಂಭವಾಗಿರುವ ಧೂಳಿನ ಬಿರುಗಾಳಿ ಮತ್ತು ಮಿಂಚಿನಿಂದಾಗಿ ರಾಜ್ಯದ 11 ಜಿಲ್ಲೆಗಳು ತತ್ತರಿಸಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ನಡುವೆ, ಧೂಳಿನ ಬಿರುಗಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತತ್‌ಕ್ಷಣವೇ ಪರಿಹಾರ ಒದಗಿಸಬೇಕು. ಅಲ್ಲದೆ, ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಆಯಾ ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ನಿರ್ದೇಶಿಸಿದ್ದಾರೆ. 

ಈ ನಡುವೆ, ಇಂಥದ್ದೇ ವಾತಾವರಣ ರಾಜ್ಯದ ಕೆಲವು ಪ್ರದೇಶಗಳಲ್ಲಿ ಭಾನುವಾರವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.