ಗುಂಡಿನ ದಾಳಿ ನಡೆಸಿದ ಅಪರಿಚಿತನ ಹೆಸರು ಡೇವಿಡ್ ಪಿ ಕೆಲ್ಲಿ ಎಂಬುದಾಗಿದ್ದು 2010ರ ವರೆಗೆ ವಾಯುಸೇನೆಯ ಲಾಜಿಸ್ಟಿಕ್ಸ್ ವಿಭಾಗದಲ್ಲಿ ನೌಕರನಾಗಿದ್ದು, ಕೆಲವು ಕಾಲ ನ್ಯೂ ಮೆಕ್ಸಿಕೊದಲ್ಲಿ ನೆಲೆಸಿದ್ದ
ಟಾಕ್ಸ್'ಸ್(ನ.06): ಅಮೆರಿಕಾದಲ್ಲಿ ಮತ್ತೆ ಗುಂಡಿನ ಸದ್ದು ಮೊರೆತ್ತಿದ್ದು, ಸೌತ್ ಟಾಕ್ಸ್'ಸ್'ನ ಚರ್ಚ್'ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಾರ್ವಜನಿಕರ ಮೇಲೆ ಕಪ್ಪು ವಸ್ತ್ರ ಧರಿಸಿದ್ದ ಅಪರಿಚಿತನೊಬ್ಬ ದಾಳಿ ನಡೆಸಿದ ಪರಿಣಾಮ 26 ಮಂದಿ ಸ್ಥಳದಲ್ಲೇ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಥರ್'ಲ್ಯಾಂಡ್'ನ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ದಾಳಿ ನಡೆದಿದ್ದು, ದಾಳಿಕೋರನನ್ನು ರಕ್ಷಣಾ ಸಿಬ್ಬಂದಿ ಹತ್ಯೆಗೈದಿದ್ದಾರೆ. ಗುಂಡಿನ ದಾಳಿ ನಡೆಸಿದ ಅಪರಿಚಿತನ ಹೆಸರು ಡೇವಿಡ್ ಪಿ ಕೆಲ್ಲಿ ಎಂದು ಗುರುತಿಸಿರುವ ರಕ್ಷಣಾ ಸಿಬ್ಬಂದಿ 2010ರ ವರೆಗೆ ವಾಯುಸೇನೆಯ ಲಾಜಿಸ್ಟಿಕ್ಸ್ ವಿಭಾಗದಲ್ಲಿ ನೌಕರನಾಗಿದ್ದು, ಕೆಲವು ಕಾಲ ನ್ಯೂ ಮೆಕ್ಸಿಕೊದಲ್ಲಿ ನೆಲೆಸಿದ್ದ ಎಂದು ತಿಳಿಸಿದ್ದಾರೆ. ಟಾಕ್ಸ್'ಸ್ನ ಇತಿಹಾಸದಲ್ಲಿ ಇದೊಂದು ಭೀಕರ ದಾಳಿ ಎಂದು ಅಲ್ಲಿನ ಗೌವರ್ನ'ರ್ ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ 11.20ರ ಸುಮಾರಿನಲ್ಲಿ ಬ್ಯಾಪ್ಟಿ'ಸ್ಟ್ ಚರ್ಚ್' ಆಗಮಿಸಿದ ಈತ ಎಆರ್-15 ಸೆಮಿಯಾಟೊಮಾಟಿಕ್ ಗನ್'ನಿಂದ ಏಕಾಏಕಿ ದಾಳಿ ನಡೆಸಿದ್ದಾನೆ. ರಕ್ಷಣಾ ಸಿಬ್ಬಂದಿಯ ಪ್ರಕಾರ ಈತ ಸಂಪೂರ್ಣ ಕಪ್ಪು ವಸ್ತ್ರವನ್ನು ಧರಿಸಿದ್ದ. ಈತ ಯಾವುದಾದರೂ ಭಯೋತ್ಪಾದಕೊಂದಿಗೆ ನಂಟು ಹೊಂದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
