ಸಾವೂರ್ ರಸ್ತೆಯಲ್ಲಿ ಅನ್ನಪೂರ್ಣ ಮ್ಯಾರೇಜ್ ಹಾಲ್'​ನಲ್ಲಿ ಭಾರೀ ಬಿರುಗಾಳಿಗೆ ಮಂಟಪದ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿರುವಾಗಲೇ ಬಿರುಗಾಳಿ ಬೀಸಿದೆ. ಇದರಿಂದ ರಕ್ಷಣೆ ಪಡೆಯಲು ಮಂಟಪದಲ್ಲಿದ್ದವರೆಲ್ಲ ಗೋಡೆಯ ಪಕ್ಕ ನಿಂತಿದ್ದು, ಒಮ್ಮೆಲೆ ಗೋಡೆ ಕುಸಿದಿದೆ. ಪರಿಣಾಮ ನಾಲ್ವರು ಮಕ್ಕಳು, 7 ಮಹಿಳೆಯರು ಸೇರಿ 25 ಮಂದಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ, ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ರಾಜಸ್ತಾನ(ಮೇ.11): ಕಲ್ಯಾಣ ಮಂಟಪ ಕುಸಿದು 25 ಮಂದಿ ಮೃತಪಟ್ಟ ಘಟನೆ ರಾಜಸ್ತಾನದ ಭರತ್​ಪುರ ಜಿಲ್ಲೆಯಲ್ಲಿ ನಡೆದಿದೆ.

ಸಾವೂರ್ ರಸ್ತೆಯಲ್ಲಿ ಅನ್ನಪೂರ್ಣ ಮ್ಯಾರೇಜ್ ಹಾಲ್'​ನಲ್ಲಿ ಭಾರೀ ಬಿರುಗಾಳಿಗೆ ಮಂಟಪದ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿರುವಾಗಲೇ ಬಿರುಗಾಳಿ ಬೀಸಿದೆ. ಇದರಿಂದ ರಕ್ಷಣೆ ಪಡೆಯಲು ಮಂಟಪದಲ್ಲಿದ್ದವರೆಲ್ಲ ಗೋಡೆಯ ಪಕ್ಕ ನಿಂತಿದ್ದು, ಒಮ್ಮೆಲೆ ಗೋಡೆ ಕುಸಿದಿದೆ. ಪರಿಣಾಮ ನಾಲ್ವರು ಮಕ್ಕಳು, 7 ಮಹಿಳೆಯರು ಸೇರಿ 25 ಮಂದಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ, ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

28 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳಲ್ಲಿ ಹೆಚ್ಚಿನವರು ಗಂಭೀರ ಸ್ಥಿತಿಯಲ್ಲಿದ್ದಾರೆ.