ಚೆನ್ನೈ, (ಜೂ.13): ಕೆಲಸ-ಬೊಗಸೆ ಬಿಟ್ಟು ಮೂರು ಹೊತ್ತು ಟಿಕ್ ಟಾಕ್ ವಿಡಿಯೋ ಮಾಡುತ್ತಾ ಅದರಲ್ಲೇ ಮುಳುಗಿರ್ತೀಯ ಎಂದು ಪತಿ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್​ನಲ್ಲಿ ನಡೆದಿದೆ. 

ಪೆರಂಬೂರ್​ ಮೂಲದ ಅನಿತಾ(24) ಎಂಬಾಕೆ ಇಂದು (ಗುರುವಾರ) ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಅನಿತಾ, ಪಳನಿವೇಲ್ ಎಂಬುವರೊಂದಿಗೆ ವಿವಾಹವಾಗಿದ್ದು, 4 ವರ್ಷದ ಹೆಣ್ಣು ಮಗಳು ಹಾಗೂ 2 ವರ್ಷದ ಗಂಡು ಮಗುವಿದೆ.

ಟಿಕ್‌ಟಾಕ್‌ ನಿಷೇಧ; ದಿನಕ್ಕೆ 3.50 ಕೋಟಿ ನಷ್ಟ: 250 ಮಂದಿ ಹುದ್ದೆ ಸಂಕಷ್ಟಕ್ಕೆ!

ಅನಿತಾ ನಿತ್ಯ ಮನೆ ಕೆಲಸವನ್ನೆಲ್ಲ ಬಿಟ್ಟು ಬರೀ ಮೊಬೈಲ್ ಹಿಡಿದುಕೊಂಡು ಟಿಕ್ ಟಾಕ್ ವಿಡಿಯೋ ಮಾಡುತ್ತಾ ಅಪ್ ಲೋಡ್ ಮಾಡುತ್ತಾ ಕಾಲಕಳೆಯುತ್ತಿದ್ದಳು.

ಇದನ್ನು ನೋಡುವಷ್ಟು ನೋಡಿದ ಪತಿ,  ಅನಿತಾಳಿಗೆ ಬೈದು ಮೊಬೈಲ್ ಒಡೆದು ಹಾಕುವುದಾಗಿ ಎಚ್ಚರಿಸಿದ್ದಾನೆ. ಇದರಿಂದ ಮನನೊಂದ ಅನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 ನನ್ನ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಆತ್ಮಹತ್ಯೆಗೂ ಮುನ್ನ ತನ್ನ ಹೇಳಿಕೆಯನ್ನು ವಿಡಿಯೋ ಮಾಡಿ ಟಿಕ್‌ ಟಾಕ್‌ನಲ್ಲಿ  ಹಾಕಿದ್ದಾಳೆ ಎಂದು ವರದಿಯಾಗಿದೆ.