ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇನ್ಸ್ಟಾಗ್ರಾಮ್, ಟಿಕ್ ಟಾಕ್ ಗಳಿಂದ ದೂರ ಇದ್ದವರು. ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚಿಗೆ ಇನ್ಸ್ಟಾಗ್ರಾಮ್  ಖಾತೆ ತೆರೆದಿದ್ದರು. 

ಭಾವೀ ಪತ್ನಿ ಪ್ರೇರಣಾ ಜೊತೆ ಮೊದಲ ಬಾರಿಗೆ ಟಿಕ್ ಟಾಕ್ ಮಾಡಿದ್ದಾರೆ. ಒರಟ ಐ ಲವ್ ಯೂ ಸಿನಿಮಾದ ಕಣ್ಣಲ್ಲಿ...ಕಣ್ಣನ್ನಿಟ್ಟು ಹಾಡಿಗೆ ಟಿಕ್ ಟಾಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

ಭಾವೀ ಪತ್ನಿಯೊಂದಿಗಿನ ಟಿಕ್ ಟಾಕ್ ವಿಡಿಯೋ ಶೇರ್ ಮಾಡಿ, ನಾನು ಅವಳ ಫೋಟೋ ತೆಗೆಯುತ್ತಿದ್ದೇನೆ ಎಂದು ಅಂದುಕೊಂಡಿದ್ದಳು. ನಾನು ಅವಳನ್ನು ಪ್ರಾಂಕ್ ಮಾಡಿದ್ದೇನೆ. ಹಹಹಹ.. ಎಂದು ಧ್ರುವ ಪ್ರೇರಣಾ ಕಾಲೆಳೆದಿದ್ದಾರೆ. 

 

ಧ್ರುವ ಸರ್ಜಾ ಬಹುಕಾಲದ ಗೆಳತಿ ಪ್ರೇರಣಾ ಜೊತೆ ಇತ್ತೀಚಿಗೆ ಬನಶಂಕರಿ ಧರ್ಮಗಿರಿ ದೇವಸ್ಥಾನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆಂಜನೇಯ ದೇವಸ್ಥಾನದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕೆಂಬ ಆಸೆಯನ್ನು ಹೊಂದಿದ್ದ ಆಂಜನೇಯ ಭಕ್ತ ಧ್ರುವ ಸರ್ಜಾ, ತನ್ನ ಆಸೆಯಂತೆ ಆಂಜನೇಯ ದೇವಸ್ಥಾನದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.