Asianet Suvarna News Asianet Suvarna News

24 ಗಂಟೆಯೂ ಆರ್‌ಬಿಐನಲ್ಲಿ ನೋಟು ಮುದ್ರಣ

ನವದೆಹಲಿ: ದೇಶದ ಹಲವೆಡೆ ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ನೋಟುಗಳ ಮುದ್ರಣವನ್ನು ತ್ವರಿತಗೊಳಿಸಿದೆ. ಆರ್‌ಬಿಐನ ನಾಲ್ಕು ನೋಟು ಮುದ್ರಣಾಲಯಗಳಲ್ಲಿ ದಿನದ 24 ಗಂಟೆಯೂ ನಿರಂತರವಾಗಿ 500 ಹಾಗೂ 200 ರು. ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ದೇಶದ ನಾಲ್ಕು ನೋಟು ಮುದ್ರಣಾಲಯಗಳಲ್ಲಿ 18​-19 ಗಂಟೆ ನೋಟುಗಳನ್ನು ಮುದ್ರಣ ಮಾಡಲಾಗುತ್ತಿದ್ದು, 3ರಿಂದ 4ಗಂಟೆ ವಿರಾಮ ನೀಡಲಾಗುತ್ತಿದೆ. ಆದರೆ ನಗದಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮುದ್ರಣಾಲಯಗಳು 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಸಾಮಾನ್ಯವಾಗಿ ನೋಟು ಮುದ್ರಣಗೊಂಡ ಬಳಿಕ ಅವು ಚಲಾವಣೆಗೆ ಬರಲು 15 ದಿನಗಳನ್ನು ತೆಗೆದುಕೊಳ್ಳುತ್ತದೆ. ಈಗಾಗಲೇ ಮುದ್ರಣಗೊಂಡಿರುವ ಹೆಚ್ಚುವರಿ ನೋಟುಗಳು ಈ ತಿಂಗಳ ಅಂತ್ಯದ ವೇಳೆಗೆ ಲಭ್ಯವಾಗಲಿವೆ.

ಇದಕ್ಕೂ ಅಪನಗದೀಕರಣದ ಬಳಿಕ 2000 ರು. ಹೊಸ ನೋಟುಗಳನ್ನು ವೇಗವಾಗಿ ಮುದ್ರಿಸಲು ಆರ್‌ಬಿಐನ ನೋಟು ಮುದ್ರಣಾಲಯಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಿದ್ದವು.

24 hours Currency print in RBI

Follow Us:
Download App:
  • android
  • ios