ಬೆಂಗಳೂರು[ಆ.03]: ನಮ್ಮ ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೊಂದು ಶಾಕಿಂಗ್ ಸುದ್ದಿ. ಲಕ್ಷಗಟ್ಟಲೆ ಶುಲ್ಕ, ವಂತಿಕೆ ಕೊಟ್ಟು, ಕಣ್ಣಿಗೆ ಎಣ್ಣೆಬಿಟ್ಟುಕೊಂಡು ವರ್ಷಗಟ್ಟಲೆ ಓದಿ ಇಂಜಿನಿಯರಿಂಗ್ ಪ್ರಮಾಣ ಪತ್ರ ಪಡೆದು ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ನಿಮ್ಮ ಪದವಿಯೇ ಅನರ್ಹ ಎಂದು ಕಂಪನಿಗಳು ತಿಳಿಸಿದರೆ ನಿಮಗೆ ಹೇಗಾಗಬೇಡ. ಹಾಗೊಂದು ವೇಳೆ ಸ್ನಾತಕೋತ್ತರ ಪದವಿ ಪಡೆಯಲು ವಿದೇಶಕ್ಕೂ, ಬೇರೆ ಕಾಲೇಜಿಗೂ ಹೋದರೂ ಮತ್ತೊಮ್ಮೆ ನಿಮ್ಮ ಪದವಿಗಳು ನಕಲಿ ಎಂದು ತಿರಸ್ಕರಿಸಲಾಗುತ್ತದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ[ಎಐಸಿಟಿಸಿ] ದೇಶದಾದ್ಯಂತ 277 ಕಾಲೇಜುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ 23 ಕರ್ನಾಟಕದಲ್ಲಿವೆ. ಈ ಕಾಲೇಜುಗಳನ್ನು ಎಐಸಿಟಿಸಿ ಅನರ್ಹ ಪಟ್ಟಿಗೆ ಸೇರಿಸಿದೆ. ಅತೀ ಹೆಚ್ಚು ನಕಲಿ ಇಂಜಿನಿಯರಿಂಗ್ ಕಾಲೇಜುಗಳಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. 
ನಕಲಿ ಕಾಲೇಜುಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದು ಒಟ್ಟು 66 ಕಾಲೇಜುಗಳಿವೆ. ತೆಲಂಗಾಣ 35, ಪಶ್ಚಿಮ ಬಂಗಾಳ 27, ಉತ್ತರ ಪ್ರದೇಶ 22, ಹರ್ಯಾಣ 18, ಬಿಹಾರ 17 ಹಾಗೂ ಮಹಾರಾಷ್ಟ್ರದಲ್ಲಿ 6 ನಕಲಿ ಕಾಲೇಜುಗಳಿವೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ದೇಶದ ಪ್ರಮುಖ ಪತ್ರಿಕೆಗಳಲ್ಲಿ ನಕಲಿ ಕಾಲೇಜುಗಳ ಪಟ್ಟಿಯನ್ನು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಶಿಕ್ಷಣ ಕಾರ್ಯದರ್ಶಿಗಳಿಗೂ ರವಾನಿಸಿದೆ.

ಕರ್ನಾಟಕದಲ್ಲಿರುವ ನಕಲಿ ಕಾಲೇಜುಗಳು

1]ಅಕಾಡೆಮಿ ಆಫ್  ಬಿಸಿನೆಸ್ ಮ್ಯಾನೇಜ್ ಮೆಂಟ್, ಟೂರಿಸಂ ಆ್ಯಂಡ್ ರಿಸರ್ಚ್, ಗರ್ವಬಾವಿಪಾಳ್ಯ, ಹೊಸೂರು ರಸ್ತೆ, ಬೆಂಗಳೂರು

2]  ಏಜಿಸ್ ಸ್ಕೂಲ್ ಆಫ್ ಬಿಸಿನೆಸ್ ಆ್ಯಂಡ್ ಟೆಲಿಕಮ್ಯುನಿಕೇಷನ್, ದೊಮ್ಮಲೂರು ಲೇಔಟ್, ಬೆಂಗಳೂರು

3]  ಬೆಂಗಳೂರು ಇನ್ಸ್ ಟಿನ್ಯೂಸ್ ಆಫ್ ಏರೋನಾಟಿಕಲ್ ಇಂಜಿನಿಯರಿಂಗ್ ಆ್ಯಂಡ್ ಇನ್ಫೋ ಟೆಕ್ನಾಲಜಿ, ಎನ್ ಜಿಇಎಫ್ ಬಡಾವಣೆ, ನಾಗರಬಾವಿ, ಬೆಂಗಳೂರು
ಬೆಂಗಳೂರು

4) ಬೆಂಗಳೂರು ಮ್ಯಾನೇಜ್ಮೆಂಟ್ ಅಕಾಡೆಮಿ, ಮಾರತ್ ಹಳ್ಳಿ, ಬೆಂಗಳೂರು  

5) ESQUIRE ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ , ಹೆಗಡೆ ನಗರ ಮುಖ್ು ರಸ್ತೆ, ಬೆಂಗಳೂರು

6 ಫೋಕಸ್ ಸ್ಕೂಲ್ ಆಫ್ ಬಿಸಿನೆಸ್ & ಫೈನಾನ್ಸ್ , ಮಲ್ಲೇಶ್ವರಂ, ಸಂಪಿಗೆ ರಸ್ತೆ, ಬೆಂಗಳೂರು          

7] ಇಂಡಿಯನ್ ಬಿಸಿನೆಸ್ ಅಕಾಡೆಮಿ, ಲಕ್ಷ್ಮಿಪುರ, ಕನಕಪುರ ಮುಖ್ಯ ರಸ್ತೆ, ಬೆಂಗಳೂರು

8] ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಏರೋನಾಟಿಕಲ್ ಅಂಡ್ ಮೆರೈನ್ ಇಂಜಿನಿಯರಿಂಗ್, ಪದ್ಮನಾಭ ನಗರ, ಬೆಂಗಳೂರು

9]ಇನ್ಸ್ಟಿಟ್ಯೂಟ್ ಆ ಬಿಸಿನೆಸ್ ಮ್ಯಾನೇಜ್ಮೆಂಟ್ & ರಿಸರ್ಚ್, ಹೊಸೂರು ಮುಖ್ಯ ರಸ್ತೆ, ಬೆಂಗಳೂರು

10] ಇನ್ಸ್ಟಿಟ್ಯೂಟ್ ಆ ಮ್ಯಾನೇಜ್ಮೆಂಟ್ &ಟೆಕ್ನಾಲಜಿ, ಬನಶಂಕರಿ 3ನೇ ಹಂತ, ಬೆಂಗಳೂರು

11]ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆ ಬಿಸಿನೆಸ್ ಮ್ಯಾನೇಜ್ಮೆಂಟ್, ಆರ್.ಟಿ. ನಗರ, ಬೆಂಗಳೂರು

12] ಇಂಟರ್ನ್ಯಾಷನಲ್ ಸ್ಕೂಲ್ ಆ ಬಿಸಿನೆಸ್ & ಮೀಡಿಯಾ, ಮಾರತ್ ಹಳ್ಳಿ, ಹೆಚ್.ಎ.ಎಲ್ ಬೆಂಗಳೂರು

13]ಎಂ.ಎಸ್. ರಾಮಯ್ಯ ಸ್ಕೂಲ್ ಆ ಅಡ್ವಾನ್ಸೆಡ್  ಸ್ಟಡೀಸ್, ಬೆಂಗಳೂರು

14]MATS ಸ್ಕೂಲ್ ಆಫ್ ಬಿಸಿನೆಸ್ ಜೆಪಿ ನಗರ 6ನೇ ಹಂತ, ಬೆಂಗಳೂರು

15] NIAM ಸೆಂಟರ್ ಫಾರ್ ಅನಲಿಟಿಕ್ಸ್ & ರಿಸರ್ಚ್ ಎಕ್ಸೆಲೆನ್ಸ್, ಜಯನಗರ, ಬೆಂಗಳೂರು

16] ಪ್ರೆಸಿಡೆನ್ಸಿ ಕಾಲೇಜ್ ಆಫ್ ಮ್ಯಾನೇಜ್'ಮೆಂಟ್ , ಬೆಂಗಳೂರು-08

17] ಸೃಷ್ಟಿ ಇನ್ಫೋ ಸಿಸ್ಟಂ, ವಿಜಯನಗರ, ಬೆಂಗಳೂರು

18] TASMAC , ಬಾಣಸವಾಡಿ, ಬೆಂಗಳೂರು-19

19]ICFAI ಇನ್ಸ್ಟಿಟ್ಯೂಟ್  ಆಫ್ ಸೈನ್ಸ್ ಮ್ಯಾನೇಜ್ ಮೆಂಟ್ , ಇನ್ಫೆಂಟ್ರಿ ರಸ್ತೆ, ಬೆಂಗಳೂರು

20] ದಿ ಇನ್ಸ್ಟಿಟ್ಯೂಟ್  ಆಫ್ ಇಂಜಿನಿಯರಿಂಗ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಶಿವಬಸವ ನಗರ, ಬೆಂಗಳೂರು

21]ಟ್ರೇನಿಂಗ್  & ಅಡ್ವಾನ್ಸೆಡ್ ಸ್ಟಡೀಸ್ ಇನ್ ಮ್ಯಾನೇಜ್ಮೆಂಟ್ ಆ್ಯಂಡ್ ಕಮ್ಯುನಿಕೇಷನ್ಸ್, ಬಸವನಗುಡಿ, ಬೆಂಗಳೂರು-04

22] ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆ ಬಿಸಿನೆಸ್ ಸ್ಟಡೀಸ್, ನಾಗವಾರ, ಬೆಂಗಳೂರು 

23] ಇಂಟರ್ ನ್ಯಾಷನಲ್  ಇನ್ಸ್ಟಿಟ್ಯೂಟ್ ಆ ಬಿಸಿನೆಸ್ ಸ್ಟಡೀಸ್, ಆರ್ ಟಿ ನಗರ,ಬೆಂಗಳೂರು

ಎಲ್ಲ ಕಾಲೇಜುಗಳ ಪಟ್ಟಿಗೆ ಎಐಸಿಟಿಸಿಯ ಈ ಲಿಂಕ್ ಕ್ಲಿಕ್ಕಿಸಿ : ದೇಶದ ನಕಲಿ ಇಂಜಿನಿಯರಿಂಗ್ ಕಾಲೇಜುಗಳು