Asianet Suvarna News Asianet Suvarna News

ರಾಜ್ಯದಲ್ಲಿವೆ 23 ನಕಲಿ ಇಂಜಿನಿಯರಿಂಗ್ ಕಾಲೇಜುಗಳು

ದೇಶದಲ್ಲಿ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳಿವೆ. ಇದರಲ್ಲಿ 66 ಕಾಲೇಜುಗಳು ದಿಲ್ಲಿಯಲ್ಲೇ ಇವೆ. ಇನ್ನು ಕರ್ನಾಟಕ ಒಂದರಲ್ಲೇ  ಒಟ್ಟು23 ಇಂಜಿನಿಯರಿಂಗ್ ಕಾಲೇಜುಗಳಿವೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 

23 Fake Engineering Colleges In Karnataka
Author
Bengaluru, First Published Aug 2, 2018, 10:33 AM IST

ನವದೆಹಲಿ: ದೇಶದಲ್ಲಿ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳಿವೆ. ಇದರಲ್ಲಿ 66 ಕಾಲೇಜುಗಳು ದಿಲ್ಲಿಯಲ್ಲೇ ಇದ್ದು, ಮೊದಲ ಸ್ಥಾನ  ಪಡೆದ ಅಪಖ್ಯಾತಿಗೆ ಪಾತ್ರವಾಗಿದೆ. ಲೋಕಸಭೆಗೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ. ಇನ್ನು 35ಕಾಲೇಜುಗಳನ್ನು ಹೊಂದಿದ ತೆಲಂಗಾಣ ನಂ.2, 27 ಕಾಲೇಜು ಹೊಂದಿದ ಬಂಗಾಳ 3ನೇ ಸ್ಥಾನ ಪಡೆದಿದೆ. 

23 ನಕಲಿ ಎಂಜಿನಿಯರಿಂಗ್ ಕಾಲೇಜುಗಳು ಕರ್ನಾಟಕದಲ್ಲಿದ್ದು 4 ನೇ ಸ್ಥಾನ ಪಡೆದಿದ್ದರೆ, 22 ಖೊಟ್ಟಿ ಕಾಲೇಜುಗಳಿರುವ ಉತ್ತರಪ್ರದೇಶ 5ನೇ ಸ್ಥಾನ ಪಡೆದಿದೆ. ಇದೇ ವೇಳೆ ಕೇಂದ್ರ ಸರ್ಕಾರ 24 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯೊಂದನ್ನು ಕೂಡ ಮತ್ತೆ ಪ್ರಕಟಿಸಿದ್ದು, ಈ ಮೊದಲಿನಂತೆ ಬೆಳಗಾವಿ ಜಿಲ್ಲೆ ಗೋಕಾಕದ ಬಡಗಣವಿ ಸರ್ಕಾರ್ ವಿಶ್ವ ಮುಕ್ತ ವಿಶ್ವವಿದ್ಯಾಲಯ ಶಿಕ್ಷಣ ಸಂಸ್ಥೆ ಕೂಡ ಪುನಃ ಸ್ಥಾನ ಪಡೆದಿದೆ. ಈ ಸಂಸ್ಥೆಗಳು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ಪರವಾನಗಿ ಪಡೆದಿಲ್ಲ ಹೊಂದಿಲ್ಲ ಎಂದು ಸರ್ಕಾರ ಹೇಳಿದೆ.

(ಸಾಂದರ್ಭಿಕ ಚಿತ್ರ )

Follow Us:
Download App:
  • android
  • ios