ಲೈಂಗಿಕ ವಿವಾದ : ಈ ಬಾರಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಇಲ್ಲ

2018 Nobel Literature Prize postponed by a year
Highlights

ವಿಶ್ವದಲ್ಲೇ ಈ ಪ್ರಶಸ್ತಿಗೆ ಉನ್ನತ ಗೌರವವಿದ್ದು ಯಾವಾಗಲು ಸಾಹಿತ್ಯ ಪ್ರಶಸ್ತಿ ವಿತರಣೆಗೆ ಯಾವುದೇ ರೀತಿಯಲ್ಲಿ ಅಗೌರವ ಉಂಟಾಗಬಾರದೆಂಬ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ. 2018ರ ಪ್ರಶಸ್ತಿಯನ್ನು 2019ರಲ್ಲಿಯೇ ನೀಡಲಾಗುತ್ತದೆ.  1943ರ ಯುದ್ಧದ ಸಂದರ್ಭವನ್ನು ಹೊರತುಪಡಿಸಿದರೆ  ಪ್ರತಿಷ್ಠಿತ ಪ್ರಶಸ್ತಿಯನ್ನು ಮುಂದೂಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಕೋಪನ್'ಹೇಗನ್(ಮೇ.04): ಆಯ್ಕೆದಾರರ ಲೈಂಗಿಕ ದುರ್ನಡತೆ ವಿವಾದದ ಹಿನ್ನಲೆಯಲ್ಲಿ 2018ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಪ್ರಶಸ್ತಿಗೆ ಆಯ್ಕೆ ಸಮಿತಿ ಸದಸ್ಯರೊಬ್ಬರ ಪತಿಯ ಲೈಂಗಿಕ ದಿರ್ನಡತೆ ಹಾಗೂ ಆರ್ಥಿಕ ಅಪರಾಧಗಳ ವಿವಾದದ ಹಿನ್ನಲೆಯಲ್ಲಿ ಈ ಬಾರಿ ಪ್ರಶಸ್ತಿ ವಿತರಣೆಯನ್ನು ರದ್ದುಗೊಳಿಸಿ ಮುಂದಿನ ಬಾರಿಗೆ ಮುಂದೂಡಲಾಗಿದೆ ಎಂದು ಸ್ಟಾಕ್'ಹೋಮ್'ನಲ್ಲಿ ನಡೆದ ಸಭೆಯಲ್ಲಿ ಅಕಾಡಮಿಯ ಶಾಶ್ವತ ಕಾರ್ಯದರ್ಶಿ ಆಂಡರ್ಸ್ ಒಲ್ಸ್ಸನ್  ತಿಳಿಸಿದರು. 
ವಿಶ್ವದಲ್ಲೇ ಈ ಪ್ರಶಸ್ತಿಗೆ ಉನ್ನತ ಗೌರವವಿದ್ದು ಯಾವಾಗಲು ಸಾಹಿತ್ಯ ಪ್ರಶಸ್ತಿ ವಿತರಣೆಗೆ ಯಾವುದೇ ರೀತಿಯಲ್ಲಿ ಅಗೌರವ ಉಂಟಾಗಬಾರದೆಂಬ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ. 2018ರ ಪ್ರಶಸ್ತಿಯನ್ನು 2019ರಲ್ಲಿಯೇ ನೀಡಲಾಗುತ್ತದೆ.  1943ರ ಯುದ್ಧದ ಸಂದರ್ಭವನ್ನು ಹೊರತುಪಡಿಸಿದರೆ  ಪ್ರತಿಷ್ಠಿತ ಪ್ರಶಸ್ತಿಯನ್ನು ಮುಂದೂಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಆಯ್ಕೆ ಸಮಿತಿಯ ಸದಸ್ಯರಾದ ಖ್ಯಾತ ಕವಯತ್ರಿಯಾದ ಕ್ಯಾತರೀನಾ ಫೋರ್ಟೆನ್ಸನ್ ಅವರ ಪತಿ ಜೀನ್ ಕ್ಲೂಡಿ ಅರ್ನಾಲ್ಟ್ ಅವರ ವಿರುದ್ಧ ಲೈಂಗಿಕ ಹಗರಣಗಳು ಹಾಗೂ ಆರ್ಥಿಕ ಅಪರಾಧಗಳು ವಿವಾದ ಕೇಳಿ ಬಂದ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಆಕೆಯನ್ನು ಬಲವಂತದಿಂದ ರಾಜೀನಾಮೆ ಕೊಡಿಸಲಾಗಿದೆ.
 
loader