‘ಕೈ’ ಬಿಟ್ಟು ಬಿಜೆಪಿ ಸೇರಿದ 2000 ಕಾರ್ಯಕರ್ತರು

2000 BJD, Cong workers join BJP in Odisha
Highlights

ಕಾಂಗ್ರೆಸ್ ಪಕ್ಷವನ್ನು ತೊರೆದು 2000 ಮಂದಿ ಕಾರ್ಯಕರ್ತರು ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. 

ಒಡಿಶಾ : ಕಾಂಗ್ರೆಸ್ ಹಾಗೂ ಬಿಜು ಜನತಾ ದಳ ತೊರೆದು 2000 ಮಂದಿ ಕಾರ್ಯಕರ್ತರು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಇಂದು ಒಡಿಶಾದ ಬರಂಬಾ ಬ್ಲಾಕ್ ಪ್ರದೇಶದಲ್ಲಿ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. 

ಅಲ್ಲದೇ ಮಾಜಿ ಐಎಎಸ್ ಅಧಿಕಾರಿ ಅಶೀಕ್ ಕುಮಾರ್ ತ್ರಿಪಾಟಿ ಅವರೂ ಕೂಡ ಬಿಜೆಪಿಯಿಂದ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದ ವೇಳೆಯೇ ಪಕ್ಷವನ್ನು ಸೇರಿದರು. 

ಇನ್ನು ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎಲ್ಲರನ್ನೂ ಕೂಡ ಆತ್ಮೀಯವಾಗಿ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ. 

ಅಲ್ಲದೇ ತ್ರಿಪಾಟಿ ಹಾಗೂ ಕಾರ್ಯಕರ್ತರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ದೊರಕಲಿದೆ ಎಂದು ಧರ್ಮೇಂದ್ರ ಪ್ರಧಾನ್ ಈ ವೇಳೆ ಹೇಳಿದ್ದಾರೆ. 

loader