ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯಲ್ಲಿ 200 ಕೋಟಿ ವೌಲ್ಯದ ಹಾವಿನ ವಿಷ ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಈ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ವೇಳೆಗೆ ಜಾಲ ಪತ್ತೆಯಾಗಿದೆ.

ಅಲಿಪುರ್‌ದೌರ್(ಅ.17): ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯಲ್ಲಿ 200 ಕೋಟಿ ವೌಲ್ಯದ ಹಾವಿನ ವಿಷ ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಈ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ವೇಳೆಗೆ ಜಾಲ ಪತ್ತೆಯಾಗಿದೆ.

ಹೋಟೆಲ್ ಒಂದರಲ್ಲಿ ನಾಲ್ವರು ವ್ಯಕ್ತಿಗಳು ಐದು ಕಂಟೈನರ್‌ಗಳಲ್ಲಿ ವಿಷವನ್ನು ಇರಿಸಿಕೊಂಡಿದ್ದರು. ವ್ಯಾಪಾರಿಗಳಂತೆ ನಟಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅವರ ಮೇಲೆ ದಾಳಿ ನಡೆಸಿದರು. ಫ್ರಾನ್ಸ್‌ನಿಂದ ಬಾಂಗ್ಲಾದೇಶ ಮೂಲಕವಾಗಿ ದಕ್ಷಿಣ ದಿನಾಜ್‌ಪುರ ಜಿಲ್ಲೆಗೆ ಕಂಟೈನರ್‌ಗಳು ಆಗಮಿಸಿದ್ದವು ಎಂದು ಹಿರಿಯ ಅರಣ್ಯಾಕಾರಿ ಸಂಜಯ ದತ್ತಾ ತಿಳಿಸಿದ್ದಾರೆ. ಘಟನೆಗೆ ಸಂಬಂಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಶುಕ್ರವಾರ ತಿಳಿಸಿದ್ದಾರೆ.