ಗ್ವಾಲಿಯರ್‌[ಜೂ.25]: ಕಾರ್ಗಿಲ್‌ ಯುದ್ಧಕ್ಕೆ 20 ವರ್ಷಗಳು ತುಂಬಿದ ಸ್ಮರಣಾರ್ಥ ಭಾರತೀಯ ವಾಯು ಪಡೆ ಗ್ವಾಲಿಯರ್‌ ವಾಯು ನೆಲೆಯಲ್ಲಿ ಯುದ್ಧದ ಪ್ರಮುಖ ಸನ್ನಿವೇಶವನ್ನು ಸೋಮವಾರ ಮರುಸೃಷ್ಟಿಸಿದೆ.

ಜಮ್ಮು- ಕಾಶ್ಮೀರದ ಡ್ರಾಸ್‌- ಕಾರ್ಗಿಲ್‌ ಪ್ರದೇಶದಲ್ಲಿರುವ ಟೈಗರ್‌ ಹಿಲ್‌ ಮಾದರಿಯನ್ನು ರಚಿಸಿ ಅದರ ಮೇಲೆ, ಮಿರಾಜ್‌ ಯುದ್ಧ ವಿಮಾನಗಳು ಬಾಂಬ್‌ಗಳನ್ನು ಸ್ಫೋಟಿಸುವ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಲ್ಲದೇ ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡ 5 ವಿಮಾಜ್‌ ಯುದ್ಧ ವಿಮಾನಗಳು, ಒಂದು ಸುಖೋಯ್‌ ಯುದ್ಧ ವಿಮಾನವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಏರ್‌ ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋವಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

20ನೇ ಕಾರ್ಗಿಲ್‌ ವಿಜಯ ದಿವಸವನ್ನು ಜು.25ರಿಂದ ​27ರ ವರೆಗೆ ಮೂರು ದಿನಗಳ ಕಾಲ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು, ದೆಹಲಿ ಮತ್ತು ಕಾಶ್ಮೀರದ ದ್ರಾಸ್‌ ಪಟ್ಟಣದಲ್ಲಿ ಕಾರ್ಯಕ್ರಮಗಳು ಜರುಗಲಿವೆ.