Asianet Suvarna News Asianet Suvarna News

20 ಸಾಧಕರಿಗೆ ಶೌರ್ಯ ಪ್ರಶಸ್ತಿ

ವಿಪತ್ತು ಒದಗಿದ ಸನ್ನಿವೇಶದಲ್ಲಿ ತಮ್ಮ ಜೀವದ ಹಂಗು ತೊರೆದು, ಆಪತ್ತಿಗೆ ಸಿಕ್ಕಿದವರನ್ನು ಕಾಪಾಡಿದ ಧೀರರನ್ನು ಗುರುತಿಸಿ ಸನ್ಮಾನಿಸಲು ಸುವರ್ಣ ನ್ಯೂಸ್‌- ಕನ್ನಡಪ್ರಭ ಸ್ಥಾಪಿಸಿರುವ ಶೌರ್ಯ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡಲಾಗಿದೆ.

20 persons get Shourya Prashasti
  • Facebook
  • Twitter
  • Whatsapp

ವಿಪತ್ತು ಒದಗಿದ ಸನ್ನಿವೇಶದಲ್ಲಿ ತಮ್ಮ ಜೀವದ ಹಂಗು ತೊರೆದು, ಆಪತ್ತಿಗೆ ಸಿಕ್ಕಿದವರನ್ನು ಕಾಪಾಡಿದ ಧೀರರನ್ನು ಗುರುತಿಸಿ ಸನ್ಮಾನಿಸಲು ಸುವರ್ಣ ನ್ಯೂಸ್‌- ಕನ್ನಡಪ್ರಭ ಸ್ಥಾಪಿಸಿರುವ ಶೌರ್ಯ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡಲಾಗಿದೆ.

ಜೂ.15ರಂದು ಬೆಂಗಳೂರಿನಲ್ಲಿ ತೀರ್ಪುಗಾರರಾದ ಖ್ಯಾತ ನಟ ದೇವರಾಜ್‌ ಹಾಗೂ ಕಾರ್ಗಿಲ್‌ ಯುದ್ಧ ಸೇನಾನಿ ಕ್ಯಾ|ನವೀನ್‌ ನಾಗಪ್ಪ ವಿಜೇತರ ಆಯ್ಕೆ ಮಾಡಿದ್ದಾರೆ.

70ಕ್ಕೂ ಅಧಿಕ ನಾಮನಿರ್ದೇಶನಗಳ ಪೈಕಿ ಪ್ರತಿ ಯೊಬ್ಬರ ಸಾಧನೆಯನ್ನು ಅಳೆದು ತೂಗಿ ವಿಜೇತರನ್ನು ಆರಿಸಲಾಗಿದೆ.

ಇಬ್ಬರು ಮರಣೋತ್ತರ ಪುರಸ್ಕೃತರೂ ಸೇರಿದಂತೆ 20 ಶೂರರನ್ನು ಪ್ರಶಸ್ತಿಗೆ ಆರಿಸಲಾಗಿದೆ. ಪ್ರಶಸ್ತಿ ವಿಜೇತರ ಸಂಪೂರ್ಣ ವಿವರವನ್ನು ಇಂದಿನ ಸಂಚಿಕೆ ಜತೆಗಿರುವ ‘ಇಂದಿನ ಸ್ಪೆಷಲ್‌' ಪುರವಣಿಯಲ್ಲಿ ಪ್ರಕಟಿಸಲಾಗಿದೆ.

ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭ ಇದೇ ಜೂ.23ರ ಶುಕ್ರವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ ನಡೆಯಲಿದೆ.

Follow Us:
Download App:
  • android
  • ios