Asianet Suvarna News Asianet Suvarna News

ನೋಟ್ ಬ್ಯಾನ್ ಸಮರ್ಥನೆ ಮಾಡುತ್ತಿದ್ದ ಬಿಜೆಪಿ ನಾಯಕ 20 ಲಕ್ಷದೊಂದಿಗೆ ಅರೆಸ್ಟ್!

ಜೆಪಿ ಯುವ ಮೋರ್ಚಾದ ನಾಯಕ ಜೆವಿಆರ್ ಅರುಣ್'ರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ವಾಸ್ತವವಾಗಿ ಅವರಿಂದ 20.55 ಲಕ್ಷ ಹಣದ ಕಂತೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಹಣ ಯಾವ ಮೂಲದಿಂದ ಬಂದಿರುವುದು ಎಂದು ತಿಳಿದಿಲ್ಲ. 36 ವರ್ಷದ ಅರುಣ್ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರವನ್ನು ಸ್ವಾಗತಿಸಿ, ಸಮರ್ಥಿಸಿದ್ದರು. ಅಲ್ಲದೆ ದೇಶದ ವಿಕಾಸಕ್ಕಾಗಿ ನಾನು ಬ್ಯಾಂಕ್ ಹೊರಗೆ ಸಾಲಿನಲ್ಲಿ ನಿಲ್ಲಲು ತಯಾರಿದ್ದೇನೆ ಎಂದು ಫೇಸ್'ಬುಕ್'ನಲ್ಲಿ ಬರೆದುಕೊಂಡಿದ್ದರು. ಪತ್ರಿಕೆಯೊಂದರಲ್ಲಿ ಬಂದ ಸುದ್ದಿಯನ್ವಯ ಅರುಣ್ ಬಳಿ 2000 ರೂಪಾಯಿಯ 926 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೇ ಅಲ್ಲದೆ 100 ರೂಪಾಯಿಯ 1530 ನೋಟು ಹಾಗೂ 50 ರೂಪಾಯಿಯ 1000 ನೋಟುಗಳಿದ್ದವು.

20 lakh seized from bjp youth leader

ಚೆನ್ನೈ(ಡಿ.12): ಬಿಜೆಪಿ ಯುವ ಮೋರ್ಚಾದ ನಾಯಕ ಜೆವಿಆರ್ ಅರುಣ್'ರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ವಾಸ್ತವವಾಗಿ ಅವರಿಂದ 20.55 ಲಕ್ಷ ಹಣದ ಕಂತೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಹಣ ಯಾವ ಮೂಲದಿಂದ ಬಂದಿರುವುದು ಎಂದು ತಿಳಿದಿಲ್ಲ.

36 ವರ್ಷದ ಅರುಣ್ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರವನ್ನು ಸ್ವಾಗತಿಸಿ, ಸಮರ್ಥಿಸಿದ್ದರು. ಅಲ್ಲದೆ ದೇಶದ ವಿಕಾಸಕ್ಕಾಗಿ ನಾನು ಬ್ಯಾಂಕ್ ಹೊರಗೆ ಸಾಲಿನಲ್ಲಿ ನಿಲ್ಲಲು ತಯಾರಿದ್ದೇನೆ ಎಂದು ಫೇಸ್'ಬುಕ್'ನಲ್ಲಿ ಬರೆದುಕೊಂಡಿದ್ದರು.

ಪತ್ರಿಕೆಯೊಂದರಲ್ಲಿ ಬಂದ ಸುದ್ದಿಯನ್ವಯ ಅರುಣ್ ಬಳಿ 2000 ರೂಪಾಯಿಯ 926 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೇ ಅಲ್ಲದೆ 100 ರೂಪಾಯಿಯ 1530 ನೋಟು ಹಾಗೂ 50 ರೂಪಾಯಿಯ 1000 ನೋಟುಗಳಿದ್ದವು.

ಈ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು 'ನಾವು ಸಂಬಂಧಿಸಿದ ದಾಖಲೆಗಳನ್ನು ತೋರಿಸಿ ಈ ಹಣವನ್ನು ತಮ್ಮಲ್ಲೇ ಇಟ್ಟುಕೊಳ್ಳುವ ಅವಕಾಶವನ್ನು ಅರುಣ್'ಗೆ ನೀಡಿದ್ದೆವು. ಆದರೆ ಅವರು ಈ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲಿಲ್ಲ. ಹೀಗಾಗಿ ನಾವು ಈ ಹಣವನ್ನು ವಶಪಡಿಸಿಕೊಂಡು ಸರ್ಕಾರಕ್ಕೊಪ್ಪಿಸಿದ್ದೇವೆ. ಐಟಿ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್'ಗೆ 2000 ರೂಪಾಯಿಯ ಇಷ್ಟು ನೋಟುಗಳನ್ನು ನೀಡಿದ ಬ್ಯಾಂಕ್ ಅಧಿಕಾರಿಯ ಹುಡುಕಾಟ ನಡೆಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

ಬಿಜೆಪಿ ವಕ್ತಾರ 'ಈ ಹಣದ ಹಿಂದಿರುವ ನಿಜ ವಿಚಾರ ತಿಳಿಸುವಂತೆ ನೋಟಿಸ್ ಕಳುಹಿಸಿದ್ದೇನೆ. ಇದಕ್ಕೆ ಸಮರ್ಥನೆ ನೀಡಿಲ್ಲವಾದರೆ ಇವರನ್ನು ಪಕ್ಷದಿಂದ ಉಚ್ಛಟಿಸಲಾಗುತ್ತದೆ' ಎಂದಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಬಿಜೆಪಿಯ ಪ್ರಾದೇಶಿಕ ಅಧ್ಯಕ್ಷ ಸುಂದರಾಜನ್ ಈಗಾಗಲೇ ಅರುಣ್'ರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ತೆಗೆದುಹಾಕಲಾಗಿದೆ' ಎಂದಿದ್ದಾರೆ.

Follow Us:
Download App:
  • android
  • ios