Asianet Suvarna News Asianet Suvarna News

ಹೊನ್ನಾವರದಲ್ಲಿ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಎರಡು ವರ್ಷದ ಮಗು ಸಾವು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಎರಡು ವರ್ಷದ ಮಗುವೊಂದು ಸೊಳ್ಳೆ ಓಡಿಸಲು ಬಳಸುವ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಮೃತಪಟ್ಟಿರುವ ಘಟನೆ ನಡೆದಿದೆ. 

2 year old boy succumbs after drinking goodnight liquid in honnavar
Author
First Published Aug 19, 2022, 11:43 AM IST

ಹೊನ್ನಾವರ: ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು ಸಾಕಷ್ಟು ಕಷ್ಟ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಕೊಂಚ ಮೈಮರೆತರೂ ಮಕ್ಕಳು ಏನನ್ನಾದರೂ ನುಂಗಿ ಬಿಡುವುದೋ ಅಥವಾ ಕರೆಂಟ್‌ ಪ್ಲಗ್‌ಗೆ ಕೈ ಹಾಕುವುದೋ ಅಥವಾ ಇನ್ಯಾವುದಾದರೂ ಅಪಾಯ ಮಾಡಿಕೊಂಡುಬಿಡಬಹುದು. ಅದೇ ರೀತಿಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ. ಎರಡು ವರ್ಷದ ಪುಟ್ಟ ಮಗುವೊಂದು ಸೊಳ್ಳೆ ಓಡಿಸಲು ಬಳಸುವ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಮೃತಪಟ್ಟಿದೆ. ಮನೆಯಲ್ಲಿ ಯಾರೂ ಗಮನಿಸದ ಸಮಯದಲ್ಲಿ ಮಗು ಕುತೂಹಲಕ್ಕೆ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಸಾವನ್ನಪ್ಪಿದೆ. ಮೃತ ಪಟ್ಟ ಮಗುವನ್ನು ಆರವ್‌ ಮಹೇಶ್‌ ನಾಯ್ಕ ಎಂದು ಗುರುತಿಸಲಾಗಿದೆ.

ಹೊನ್ನಾವರ ತಾಲೂಕಿನ ಕಾವೂರು ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗುಡ್‌ನೈಟ್‌ ಲಿಕ್ವಿಡ್‌ ಅನ್ನು ಮಗುವಿನ ಕೈಗೆ ಸಿಗುವಂತೆ ನೆಲದ ಮೇಲೆ ಇಡಲಾಗಿತ್ತು. ಮಗುವಿನ ಕೈಗೆ ಸಿಕ್ಕಿದ್ದರಿಂದ ಅದನ್ನು ಮಗು ಕುಡಿದಿದೆ. ನಂತರ ಮಣಿಪಾಲ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಮಗುವನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಎಂತಾ ದುರಂತ ಘಟನೆ ನಡೆಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. 

ಇದನ್ನೂ ಓದಿ: ಕ್ಯಾನ್ಸರ್‌ನಿಂದ ಕುಟುಂಬ ಅನಾಥವಾಗುವ ಭಯ, ಪತ್ನಿ ಹಾಗೂ ಕಂದನ ಕೊಲೆಗೈದ ವ್ಯಕ್ತಿ ಆತ್ಮಹತ್ಯೆ!

ತಮಿಳುನಾಡಿನಲ್ಲೂ ನಡೆದಿತ್ತು ಇಂತದ್ದೇ ಘಟನೆ:
ಕಳೆದ ವರ್ಷ ಮೂರು ವರ್ಷದ ಮಗುವೊಂದು ತಮಿಳುನಾಡಿದ ಪಲ್ಲವರಮ್‌ನಲ್ಲಿ ಮಸ್ಕಿಟೊ ಲಿಕ್ವಿಡ್‌ ಕುಡಿದು ಮೃತಪಟ್ಟಿತ್ತು. ಮೃತಪಟ್ಟ ಮಗುವಿನ ಹೆಸರು ಕಿಶೋರ್‌. ಪೋಷಕರು ಸುತ್ತ ಇರದ ಸಮಯದಲ್ಲಿ ಲಿಕ್ವಿಡ್‌ ಅನ್ನು ಕುಡಿದ ಮಗು ತಕ್ಷಣ ವಾಂತಿ ಮಾಡಲು ಆರಂಭಿಸಿತ್ತು. ಮಗು ಕಿರುಚಾಡುತ್ತಿರುವುದನ್ನು ಗಮನಿಸಿದ ಪೋಷಕರು ತಕ್ಷಣ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ಬೇಕಾದ ಸವಲತ್ತು ಇಲ್ಲದ ಕಾರಣ ಕ್ರೋಮ್‌ಪೇಟ್‌ನ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಲಾಯಿತು. ನಂತರ ಅಲ್ಲೂ ಸಾಧ್ಯವಾಗದೇ ಎಗ್ಮೋರ್‌ನ ಮಕ್ಕಳ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಸಾಕಷ್ಟು ಸಮಯ ರಸ್ತೆಯಲ್ಲೇ ವ್ಯರ್ಥವಾಗಿತ್ತು. ಇದರ ಪರಿಣಾಮ ಮಗು ಚಿಕಿತ್ಸೆ ವೇಳೆ ಮೃತಪಟ್ಟಿತ್ತು.

ಇದನ್ನೂ ಓದಿ: Belagavi: ಸವದತ್ತಿಯಲ್ಲಿ ಕತ್ತು ಕೊಯ್ದು ಪತ್ನಿ ಹತ್ಯೆಗೈದ ಪಾಪಿ ಪತಿ!

Follow Us:
Download App:
  • android
  • ios