ಈ ಮಧ್ಯೆ ನೋಟುಗಳು ಖಾಲಿಯಾಗಿದ್ದರಿಂದ ದೆಹಲಿ ಬ್ಯಾಂಕ್ ವೊಂದು ಹಣ ವಿನಿಯಮ ಮಾಡಲು ಬಂದ ತನ್ನ ಗ್ರಾಹಕರೊಬ್ಬರಿಗೆ 20 ಸಾವಿರ ರೂಪಾಯಿಗೆ, ನೋಟಿನ ಬದಲು 10 ರೂಪಾಯಿ ನಾಣ್ಯವನ್ನೇ ಕೊಟ್ಟಿದೆ. 

ದೆಹಲಿ(ನ.19): 500, 1000 ರೂಪಾಯಿ ಮುಖಬೆಲೆಯ ನೋಟುಗಳ ನಿಷೇಧದ ಬಿಸಿ ಇನ್ನೂ ಮುಂದುವರಿದಿದ್ದು, ಹಲವು ಬ್ಯಾಂಕ್, ಎಟಿಎಂಗಳ ಮುಂದೆ ಜನರ ಕ್ಯೂ ಕಡಿಮೆಯಾಗಿಲ್ಲ.

ಈ ಮಧ್ಯೆ ನೋಟುಗಳು ಖಾಲಿಯಾಗಿದ್ದರಿಂದ ದೆಹಲಿ ಬ್ಯಾಂಕ್ ವೊಂದು ಹಣ ವಿನಿಯಮ ಮಾಡಲು ಬಂದ ತನ್ನ ಗ್ರಾಹಕರೊಬ್ಬರಿಗೆ 20 ಸಾವಿರ ರೂಪಾಯಿಗೆ, ನೋಟಿನ ಬದಲು 10 ರೂಪಾಯಿ ನಾಣ್ಯವನ್ನೇ ಕೊಟ್ಟಿದೆ. 

ತುರ್ತಾಗಿ ನಗದು ಬೇಕಾಗಿದ್ದರಿಂದ ಇಮ್ತಿಯಾಜ್ ಅಲಾಂ ಎಂಬವರು 500, 1000 ರೂಪಾಯಿ ಹಳೇ ನೋಟನ್ನು ವಿನಿಮಯ ಮಾಡಿಕೊಳ್ಳಲು ದೆಹಲಿಯ ಜಾಮಿಯಾ ಕೋ ಆಪರೇಟಿವ್ ಬ್ಯಾಂಕ್ ಗೆ ಹೋಗಿದ್ದರು.

ನಮ್ಮಲ್ಲಿ ಅಷ್ಟು ನಗದು ಇಲ್ಲ, ಅಲ್ಲದೇ ದಿನಕ್ಕೆ 2 ಸಾವಿರ ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದರು. ಆದರೆ ತನಗೆ ತುರ್ತಾಗಿ ಹಣ ಬೇಕೆಂದು ಅಲಾಂ ಮ್ಯಾನೇಜರ್ ಬಳಿ ಮನವಿ ಮಾಡಿದ್ದಾರೆ.

ಹೀಗಾಗಿ ಬ್ಯಾಂಕ್ ಮ್ಯಾನೇಜರ್ 10 ರೂಪಾಯಿ ನಾಣ್ಯವನ್ನೇ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಕೊನೆಗೆ ಅಲಾಂ 20 ಸಾವಿರಕ್ಕೆ ನೋಟಿನ ಬದಲು, 10 ರೂಪಾಯಿ ಬೆಲೆಯ 2 ಸಾವಿರ ನಾಣ್ಯಗಳನ್ನು ಕೊಟ್ಟಿದ್ದಾರೆ. 17 ಕೆ.ಜಿ ತೂಕವಿದ್ದ 10 ರೂ. ಬೆಲೆಯ ನಾಣ್ಯಗಳು ಹೊರಲಾಗದೆ ಹೊತ್ತು ಹೋಗಿದ್ದಾರೆ.