ರುದ್ರೇಶ್ ಮತ್ತು ಖದೀರ್`ಗೂ ೩ ವರ್ಷದ ಹಿಂದೆ ಗಲಾಟೆ ನಡೆದಿತ್ತು. ಖದಿರ್, ರುದ್ರೇಶ್ ತಂಗಿಯನ್ನ ಚುಡಾಯಿಸಿದ್ದ. ಇದರಿಂದ ಕುಪಿತಗೊಂಡಿದ್ದ ರುದ್ರೇಶ್ ಖದೀರ್ ಮನೆಗೆ ತೆರಳಿ ಹಲ್ಲೆ ಮಾಡಿದ್ದರು.

ಬೆಂಗಳೂರು(ಅ.17): ಆರೆಸ್ಸೆಸ್`ನ ಗಣ ಮುಖಂಡ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖದೀರ್ ಮತ್ತು ಸಾಧಿಕ್ ಎಂಬ ಇಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ರುದ್ರೇಶ್ ಮತ್ತು ಖದೀರ್`ಗೂ ೩ ವರ್ಷದ ಹಿಂದೆ ಗಲಾಟೆ ನಡೆದಿತ್ತು. ಖದಿರ್, ರುದ್ರೇಶ್ ತಂಗಿಯನ್ನ ಚುಡಾಯಿಸಿದ್ದ. ಇದರಿಂದ ಕುಪಿತಗೊಂಡಿದ್ದ ರುದ್ರೇಶ್ ಖದೀರ್ ಮನೆಗೆ ತೆರಳಿ ಹಲ್ಲೆ ಮಾಡಿದ್ದರು. ಬಳಿಕ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು. ಇಬ್ಬರನ್ನೂ ಕರೆದು ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಖದೀರ್ ನ ವಿಚಾರಣೆ ಚುರುಕಾಗಿದೆ. ನಿನ್ನೆ ಸಂಜೆಯಿಮದಲೇ ಪೊಳಿಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.