ಇಬ್ಬರು ಶಾಸಕರ ರಾಜೀನಾಮೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 1:33 PM IST
2 MLAs quit over Maratha stir In Maharastra
Highlights

ಇಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸರ್ಕಾರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ ಮರಾಠ ಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. 

ಮುಂಬೈ: ಮರಾಠರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ನೀಡಬೇಕು ಎಂದು ಆಗ್ರಹಿಸಿ ಬುಧವಾರ ಮರಾಠಾ ಕ್ರಾಂತಿ ಮೋರ್ಚಾ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳು ಕರೆ ನೀಡಿದ್ದ ‘ಮಹಾರಾಷ್ಟ್ರ ಬಂದ್’ ಹಿಂಸಾತ್ಮಕವಾಗಿ ಅಂತ್ಯಗೊಂಡಿದೆ. ಎಲ್ಲಾ ಮುಗಿದ ಬಳಿಕ ಸಂಜೆ ವೇಳೆ ‘ಬಂದ್ ’ಅನ್ನು ಹೋರಾಟಗಾರರು ಹಿಂತೆಗೆದುಕೊಂಡಿದ್ದು, ಬಂದ್‌ಗೆ ಕರೆ ನೀಡಿದ್ದ ತಮ್ಮ ಉದ್ದೇಶ ಈಡೇರಿದೆ ಎಂದು ಹೇಳಿಕೊಂಡಿದ್ದಾರೆ. 

ಮರಾಠರಿಗೆ ಮೀಸಲು ನೀಡಿಕೆ ಸಂಬಂಧ ಮಾತುಕತೆಗೆ ತಾವು ಸಿದ್ಧ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನ ವೀಸ್ ಪುನರುಚ್ಚರಿಸಿದ್ದಾರೆ. ಆದರೆ, ಬೇಡಿಕೆ ಈಡೇರದಿದ್ದರೆ ಆ.೯ರಂದು ಮತ್ತೆ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ. 

ವ್ಯಾಪಕ ಹಿಂಸೆ: ನವೀ ಮುಂಬೈ ಮತ್ತು ಸತಾರಾದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ಕಾರಣ ಮೂವರು ಪೊಲೀಸರಿಗೆ ಗಾಯಗಳಾದವು. ಉದ್ರಿಕ್ತ ರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಪ್ಲಾಸ್ಟಿಕ್ ಬುಲೆಟ್‌ಗಳನ್ನು ಹಾರಿಸಿ, ಅಶ್ರುವಾಯು ಸಿಡಿಸಿದರು. 

ಶಿವಸೇನೆ ಶಾಸಕ ರಾಜೀನಾಮೆ: ಈ ಮಧ್ಯೆ ಮೀಸಲಿಗೆ ಸುಗ್ರೀವಾಜ್ಞೆ ಬೇಡಿಕೆ ಇಟ್ಟು ಶಿವಸೇನಾ ಶಾಸಕ ಹರ್ಷ ವರ್ಧನ ಜಾಧವ್ ರಾಜೀನಾಮೆ ಸಲ್ಲಿಸಿದ್ದಾರೆ. ಇವರ ರಾಜೀನಾಮೆ ಬೆನ್ನಲ್ಲೇ ಇನ್ನೋರ್ವ NCP ಶಾಸಕ ಬಹುಸಾಹೇಬ್ ಚಿಟಗೋಂಕರ್ ರಾಜೀನಾಮೆ ನೀಡಿದ್ದು, ಈ ಮೂಲಕ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. 

loader