ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಇಬ್ಬರು ಬಾಲಕಿಯರನ್ನು ಗೋ ಹತ್ಯೆ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಮುಜಾಫರ್ನಗರ(ಡಿ.31): ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಇಬ್ಬರು ಬಾಲಕಿಯರನ್ನು ಗೋ ಹತ್ಯೆ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

12 ವರ್ಷದ ಓರ್ವ ಬಾಲಕಿ ಹಾಗೂ 16 ವರ್ಷದ ಇನ್ನೋರ್ವ ಬಾಲಕಿಯರನ್ನು ಅವರ ತಾಯಿ ಸೇರಿದಂತೆ ಇತರರೊಂದಿಗೆ ಗೋ ಹತ್ಯೆ ಆರೋಪದಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 9 ಮಂದಿಯನ್ನು ಬಂಧಿಸಿದ ಪೊಲೀಸರು ಅವರೊಂದಿಗೆ ಮಕ್ಕಳನ್ನು ಕರೆದೊಯ್ದು ಜೈಲಿಗೆ ಹಾಕಿದ್ದಾರೆ.

ಮಕ್ಕಳನ್ನು ಬಾಲಾಪರಾಧಿಗಳನ್ನು ಹಾಜರುಪಡಿಸುವ ಕೋರ್ಟ್’ಗೂ ಹಾಜರುಪಡಿಸದೇ, ಬಾಲಾಪರಾಧಿಗಳನ್ನು ಇರಿಸುವ ಸ್ಥಳದಲ್ಲಿಯೂ ಇರಿಸದೇ ಜೈಲಿನಲ್ಲಿ ಇರಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪೋಷಕರೊಂದಿಗೆ ಮಕ್ಕಳನ್ನು ಬಂಧಿಸಿದ್ದರಿಂದ ಪೊಲೀಸರ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ತನಿಖೆಗೆ ಆದೇಶ ನೀಡಲಾಗಿದೆ.