ಲಾಲು ಜೊತೆ ಜೈಲಲ್ಲಿರಲು ಹಣ ಕದ್ದು ಇವರೂ ಜೈಲು ಸೇರಿಕೊಂಡರು!

news | Wednesday, January 10th, 2018
Suvarna Web Desk
Highlights

ಲಾಲು ಜತೆ ತಾವೂ ಜೈಲಿನಲ್ಲಿರಬೇಕು ಎಂದು ಬಯಸಿ ಇಬ್ಬರು ಬೆಂಬಲಿಗರು ಉದ್ದೇಶ ಪೂರ್ವಕವಾಗಿ ಅಪರಾಧ ಎಸಗಿ ರಾಂಚಿಯ ಬಿರ್ಲಾ ಮುಂಡಾ ಜೈಲು  ಸೇರಿಕೊಂಡಿದ್ದಾರೆ.

ರಾಂಚಿ (ಜ.10): ಲಾಲು ಜತೆ ತಾವೂ ಜೈಲಿನಲ್ಲಿರಬೇಕು ಎಂದು ಬಯಸಿ ಇಬ್ಬರು ಬೆಂಬಲಿಗರು ಉದ್ದೇಶ ಪೂರ್ವಕವಾಗಿ ಅಪರಾಧ ಎಸಗಿ ರಾಂಚಿಯ ಬಿರ್ಲಾ ಮುಂಡಾ ಜೈಲು  ಸೇರಿಕೊಂಡಿದ್ದಾರೆ.

ಮದನ್ ಮತ್ತು ಲಕ್ಷ್ಮಣ್ ಎಂಬುವರೇ ಜೈಲು ಸೇರಿದ ‘ಲಾಲು ಅಂಧಾಭಿಮಾನಿಗಳು’. ಇವರ ವಿರುದ್ಧ ಸುಮಿತ್ ಯಾದವ್ ಎಂಬ ಪಕ್ಕದ ಮನೆಯ ವ್ಯಕ್ತಿ ರಾಂಚಿಯ ದರೋಂಡಾ ಠಾಣೆಗೆ ದೂರು ನೀಡಿ, ‘ನನ್ನನ್ನು ಮದನ್ ಹಾಗೂ ಲಕ್ಷ್ಮಣ್ ಹೊಡೆದರು ಹಾಗೂ 10 ಸಾವಿರ ರೂ. ಕಿತ್ತುಕೊಂಡರು’ ಎಂದು ಆರೋಪಿಸಿದ್ದರು. ಆದರೆ ಪೊಲೀಸರಿಗೆ ಈ ದೂರಿನ ಸಾಚಾತನದ ಬಗ್ಗೆ ಸಂದೇಹ ಬಂದು, ದಾಖಲಿಸಿ

ಕೊಳ್ಳಲು ನಿರಾಕರಿಸಿದರು. ಆದರೆ ಕೊನೆಗೆ ಲೋವರ್ ಬಜಾರ್ ಠಾಣೆಯಲ್ಲಿ ಈ ದೂರು ಸ್ವೀಕಾರಗೊಂಡಿತು. ಬಳಿಕ ಈ ಲಾಲು ಆಪ್ತರು ಠಾಣೆಗೆ ಶರಣಾದರು. ವಿಶೇಷವೆಂದರೆ ಲಾಲು ಜೈಲು ಪಾಲಾಗಬಹುದೆಂಬ ಗುಮಾನಿಯ ಮೇರೆಗೆ ಲಾಲು ಜೈಲು ಸೇರುವ ಮುನ್ನವೇ ಅಪರಾಧ ಎಸಗಿ ಜೈಲು ಸೇರಿಕೊಂಡಿದ್ದರು.

 

Comments 0
Add Comment

    Related Posts

    Siddaramaiah Followers Prompted Chaos in Amit Shah Meeting Says Srinivas Prasad

    video | Friday, March 30th, 2018
    Suvarna Web Desk