ಕಳೆದ ಐದು ದಿನಗಳಿಂದ ವಿವಿಧೆಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ, ಮುಜಾಫರ್‌ ನಗರ ಮೂಲದ ಇಬ್ಬರು ಆಭರಣ ಉದ್ಯಮಿಗಳನ್ನು ಬಂಧಿಸಿದೆ.
ಮೇರಠ್: ಕಳೆದ ಐದು ದಿನಗಳಿಂದ ವಿವಿಧೆಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ, ಮುಜಾಫರ್ ನಗರ ಮೂಲದ ಇಬ್ಬರು ಆಭರಣ ಉದ್ಯಮಿಗಳನ್ನು ಬಂಧಿಸಿದೆ.
ಲಷ್ಕರ್ ಎ ತೊಯ್ಬಾ ನಿರ್ವಾಹಕನಿಗೆ ಹಣ ಒದಗಿಸಿದ ಆಪಾದನೆಯಲ್ಲಿ ಆಭರಣ ಉದ್ಯಮಿಗಳಾದ ದಿನೇಶ್ ಗರ್ಗ್ (34) ಮತ್ತು ಆದೀಶ್ ಕುಮಾರ್ ಜೈನ್ (54)ರನ್ನು ಬಂಧಿಸಲಾಗಿದೆ. ಈ ಇಬ್ಬರು ವ್ಯಕ್ತಿಗಳಿಗೆ ಸೌದಿ ಅರೇಬಿಯಾ ಮೂಲದ ಚಿನ್ನ ಕಳ್ಳ ಸಾಗಾಣಿಕೆ ದಾರರೊಂದಿಗೆ ಟೆಲಿಫೋನ್ ಸಂಪರ್ಕವಿತ್ತು.
ತಾವು ಖರೀದಿಸಿದ ಕಳ್ಳ ಸಾಗಾಣಿಕೆ ಮಾಡಿದ ಚಿನ್ನದ ಬೆಲೆಯನ್ನು ಅವರು ನಗದು ರೂಪದಲ್ಲಿ ಕೊರಿಯರ್ ಅಥವಾ ಕೆಲವೊಂದು ಅಕ್ರಮ ಮೂಲಗಳ ಮೂಲಕ ಪಾವತಿಸುತ್ತಿದ್ದರು.
ಇತ್ತೀಚೆಗೆ ಉತ್ತರಾಖಂಡದ ರೂರ್ಕಿಯಲ್ಲಿ ಬಂಧಿತನಾದ ಅಬ್ದುಲ್ ಸಮದ್ ಎಂಬಾತನ ಒಂದು ಮೂಲದಿಂದಲೂ ಈ ಹಣ ಪಾವತಿಯಾಗುತಿತ್ತು. ಸಮದ್ ಲಷ್ಕರ್ ಉಗ್ರ ಜಾಲದ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
