ಇಸ್ತಾಂಬುಲ್'ನ ಓರ್ಟಾಕೋಯ್'ನಲ್ಲಿರುವ ರೀನಾ ನೈಟ್ ಕ್ಲಬ್'ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 35 ಮಂದಿ ಮೃತಪಟ್ಟಿದ್ದರೆ, 40 ಮಂದಿ ಗಾಯಗೊಂಡಿದ್ದಾರೆ.
ನವದೆಹಲಿ (ಜ.01): ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಇಸ್ತಾಂಬುಲ್'ನ ನೈಟ್'ಕ್ಲಬ್'ವೊಂದರ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಪೈಕಿ ಇಬ್ಬರು ಭಾರತೀಯರಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಮೃತಪಟ್ಟವರನ್ನು ಮಾಜಿ ರಾಜ್ಯಸಭೆ ಸಂಸದರ ಪುತ್ರ ಆಬಿಸ್ ರಿಝ್ವಿ ಹಾಗೂ ಗುಜರಾತಿನ ಖುಷಿ ಶಾ ಎಂದುತಿಳಿದು ಬಂದಿದೆ.
ಇಸ್ತಾಂಬುಲ್'ನ ಓರ್ಟಾಕೋಯ್'ನಲ್ಲಿರುವ ರೀನಾ ನೈಟ್ ಕ್ಲಬ್'ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 35 ಮಂದಿ ಮೃತಪಟ್ಟಿದ್ದರೆ, 40 ಮಂದಿ ಗಾಯಗೊಂಡಿದ್ದಾರೆ.
ಸುಮಾರು 600 ಮಂದಿಯಿದ್ದ ನೈಟ್'ಕ್ಲಬ್ ಮೇಲೆ ಸಾಂಟಾ ಕ್ಲಾಸ್'ನ ವೇಷ ಧರಿಸಿ ಬಂದೂಕು ಬಚ್ಚಿಟ್ಟುಕೊಂಡು ಬಂದಿದ್ದ ಶಂಕಿತ ಉಗ್ರ ಮೊದಲಿಗೆ ನೈಟ್'ಕ್ಲಬ್'ನ ಹೊರಗಿದ್ದ ಪೊಲೀಸ್ ಪೇದೆ ಮತ್ತು ಓರ್ವ ನಾಗರಿಕನನ್ನು ಹತ್ಯೆಗೈದಿದ್ದಾನೆ. ಬಳಿಕ ಹೊಸ ವರ್ಷದ ಆಚರಣೆಯ ಖುಷಿಯಲ್ಲಿದ್ದ ಜನರ ಮೇಲೆ ಯದ್ವಾತದ್ವ ಗುಂಡಿನ ದಾಳಿ ನಡೆಸಿದ್ದಾನೆ.