ಕೆಪಿಎಸ್’ಸಿ ಕರ್ಮಕಾಂಡ; ಇಬ್ಬರು ಪೇದೆಗಳು ಸಸ್ಪೆಂಡ್

First Published 17, Mar 2018, 10:04 AM IST
2 Constable Suspend due to Deal with KPSC Aspirants
Highlights

ಕೆಪಿಎಸ್’ಸಿ ಕರ್ಮಕಾಂಡ ಪ್ರಕರಣವೊಂದು ಬಯಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರು ಅಮಾನತುಗೊಂಡಿದ್ದಾರೆ. 

ಗುಲ್ಬರ್ಗಾ (ಮಾ. 17): ಕೆಪಿಎಸ್’ಸಿ ಕರ್ಮಕಾಂಡ ಪ್ರಕರಣವೊಂದು ಬಯಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರು ಅಮಾನತುಗೊಂಡಿದ್ದಾರೆ. 

ಅಕ್ರಮವಾಗಿ ನೇಮಕವಾದ ಅಭ್ಯರ್ಥಿಗಳ ಬಳಿ ಡೀಲ್ ನಡೆಸುತ್ತಿದ್ದ ಇಬ್ಬರು ಪೇದೆಗಳಾದ  ಅಶೋಕ್ ನಗರ ಠಾಣೆ ರೈಟರ್ ನೆಹರು ಸಿಂಗ್ & ಪೇದೆ ಮಲ್ಲಿಕಾರ್ಜುನ್ ಎಂಬುವವರು ಅಮಾನತುಗೊಂಡಿದ್ದಾರೆ.  ಕಲಬುರಗಿ ಎಸ್ಪಿ ಎನ್ ಶಶಿಕುಮಾರ್ ಆದೇಶ ಅಮಾನತು ಆದೇಶ ನೀಡಿದ್ದಾರೆ. 
ಅಕ್ರಮವಾಗಿ ನೇಮಕವಾದ ಅಭ್ಯರ್ಥಿಗಳ ಬಳಿ ಲಕ್ಷಾಂತರ ರೂಪಾಯಿ ಹಣ ಡೀಲ್ ಮಾಡುತ್ತಿದ್ದರು.  ಅಕ್ರಮವಾಗಿ ನೇಮಕಗೊಂಡಿರಿ, ಕೆಲಸ ಕಳೆದುಕೊಳ್ಳುತ್ತೀರಿ ಅಂತಾ ಧಮ್ಕಿ ಹಾಕಿ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

loader