ಪೊಲೀಸರ ಹೆಸರಲ್ಲಿ ಬ್ಲಾಕ್ & ವೈಟ್ ದಂಧೆಯಲ್ಲಿ ಭಾಗಿಯಾಗಿದ್ದ  ಸಿಸಿಬಿ ಪೇದೆಗಳಾದ ನರಸಿಂಹ ಮೂರ್ತಿ, ಗಂಗಾಧರ್ 'ರನ್ನು  ಅಮಾನತುಗೊಳಿಸಿ ಬೆಂಗಳೂರು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು (ಡಿ.01): ಪೊಲೀಸರ ಹೆಸರಲ್ಲಿ ಬ್ಲಾಕ್ & ವೈಟ್ ದಂಧೆಯಲ್ಲಿ ಭಾಗಿಯಾಗಿದ್ದ ಸಿಸಿಬಿ ಪೇದೆಗಳಾದ ನರಸಿಂಹ ಮೂರ್ತಿ, ಗಂಗಾಧರ್ 'ರನ್ನು ಅಮಾನತುಗೊಳಿಸಿ ಬೆಂಗಳೂರು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಸಿಸಿಬಿ ಪೇದೆಗಳು ಮಹಿಳೆಯೊಬ್ಬರಿಂದ 1 ಕೋಟಿ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಹೈಗ್ರೌಂಡ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮೇಲ್ನೋಟಕ್ಕೆ ಮೂವರು ತಪ್ಪು ಎಸಗಿರುವುದು ಕಂಡುಬಂದಿದೆ. ಯಾರ ಆದೇಶದ ಮೇರೆಗೆ ರೇಡ್​ ಮಾಡಲು ಹೋಗಿದ್ದಾರೆಂದು ತಿಳಿದಿಲ್ಲ. ಮೂವರ ವಿಚಾರಣೆ ಬಳಿಕ ಸತ್ಯಾಂಶ ತಿಳಿದು ಬರಲಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೇಳಿದ್ದಾರೆ.