ಮಿಲಿಯನೇರ್’ಗಳ ಪಟ್ಟಿಗೆ 2.6 ಲಕ್ಷ ಮಂದಿ ಸೇರ್ಪಡೆ

First Published 20, Jun 2018, 12:41 PM IST
2.6 lakh Indians  joins Millionaire List
Highlights

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)ಯ ಪ್ರತಿಕೂಲ ಪರಿಣಾಮಗಳ ಹೊರತಾಗಿಯೂ 2017 ನೇ ಸಾಲಿನಲ್ಲಿ ಭಾರತದಲ್ಲಿ ಮಿಲಿಯನೇಯರ್ (6.8 ಕೋಟಿ ರು.ಗೂ ಅಧಿಕ ಸಂಪತ್ತು ಉಳ್ಳವರು)ಗಳ ಸಂಖ್ಯೆ ಹಾಗೂ ಅವರ ಆಸ್ತಿ ಶೇ.20 ರಷ್ಟು ಏರಿಕೆಯಾಗಿದೆ.

ಮುಂಬೈ (ಜೂ. 20):  ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)ಯ ಪ್ರತಿಕೂಲ ಪರಿಣಾಮಗಳ ಹೊರತಾಗಿಯೂ 2017 ನೇ ಸಾಲಿನಲ್ಲಿ ಭಾರತದಲ್ಲಿ ಮಿಲಿಯನೇಯರ್ (6.8 ಕೋಟಿ ರು.ಗೂ ಅಧಿಕ ಸಂಪತ್ತು ಉಳ್ಳವರು)ಗಳ ಸಂಖ್ಯೆ ಹಾಗೂ ಅವರ ಆಸ್ತಿ ಶೇ.20 ರಷ್ಟು ಏರಿಕೆಯಾಗಿದೆ.

ಜಾಗತಿಕ ಸರಾಸರಿಗಿಂತ ಇದು ಅತ್ಯಧಿಕವಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿರಿವಂತರ ಸಂಖ್ಯೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಏರುತ್ತಿದೆ ಎಂದು ಅಧ್ಯಯನ ವರದಿಯೊಂದು ಮಂಗಳವಾರ ತಿಳಿಸಿದೆ. 10 ಲಕ್ಷ ಅಮೆರಿಕನ್ ಡಾಲರ್ (ಅಂದರೆ, 6.8 ಕೋಟಿ ರು.) ಹೂಡಿಕೆ ಮಾಡುವಷ್ಟು ಆಸ್ತಿ ಹೊಂದಿರುವವರನ್ನು ಅಧಿಕ  ಸಂಪತ್ತಿನ ವ್ಯಕ್ತಿಗಳು ಎಂದು ವ್ಯಾಖ್ಯಾನಿಸಲಾಗುತ್ತದೆ. ಅಂಥವರ ಸಂಖ್ಯೆ ಭಾರತದಲ್ಲಿ ಕಳೆದ ವರ್ಷ 2.63 ಲಕ್ಷದಷ್ಟು ಹೆಚ್ಚಾಗಿದೆ.

ಅಂದರೆ ಶೇ.20.4 ರಷ್ಟು ಏರಿಕೆಯಾಗಿದೆ. ಇದೇ ವೇಳೆ, ಅವರ ಸಂಪತ್ತು ಶೇ.21 ರಷ್ಟು ಹೆಚ್ಚಳ ಕಂಡು, 68 ಲಕ್ಷ ಕೋಟಿ ರು.ಗೆ ಜಿಗಿದಿದೆ ಎಂದು ಫ್ರಾನ್ಸ್‌ನ ಐಟಿ ಕಂಪನಿ ಕ್ಯಾಪ್‌ಜೆಮಿನಿ ಸಿದ್ಧಪಡಿಸಿರುವ ವರದಿ ತಿಳಿಸಿದೆ. 

loader