ಕೆಲವೊಮ್ಮೆ ಅವಘಡಗಳು ಗೊತ್ತಿಲ್ಲದೆ ನಡೆದು ಹೋಗುತ್ತವೆ. ಆದರೆ ಪರಿಣಾಮ ಮಾತರ ಘೋರವಾರುತ್ತದೆ. ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಅವಘಡವಾಗಿ ಬದಲಾಗಿದೆ. ಅಂಥದ್ದೆ ಒಂದು ದುರಂತಕ್ಕೆ ಕೊಯಂಬತ್ತೂರು ಸಾಕ್ಷಿಯಾಗಿದೆ.
ಕೊಯಂಬತ್ತೂರು[ಜು.13] ವಿಪತ್ತು ಸನ್ನದ್ಧತೆ ಜಾಗೃತಿ ಮೂಡಿಸುವ ಪ್ರಾತ್ಯಕ್ಷಿಕೆ ಆ ಕಾಲೇಜಿನಲ್ಲಿ ನಡೆಯುತ್ತಿತ್ತು. ಈ ವೇಳೆ ಆತಂಕಕ್ಕೆ ಸಿಲುಕಿದ್ದ ವಿದ್ಯಾರ್ಥಿನಿಯನ್ನು ಟ್ರೈನರ್ ಕೆಲಕ್ಕೆ ತಳ್ಳಿದ ಪರಿಣಾಮ ವಿದ್ಯಾರ್ಥಿನಿ ದುರಂತ ಸಾವು ಕಾಣಬೇಕಾಯಿತು.
ಬಲವಂತವಾಗಿ ತಳ್ಳಿದ ಪರಿಣಾಮ ಆಕೆಯ ತಲೆ ಮೊದಲ ಮಹಡಿಯ ತಡೆಗೋಡೆಗೆ ಬಡಿದು ಸಾವನ್ನಪ್ಪಿದ್ದಾಳೆ. ಕೊವಯ್ ಕಲೈಮಗಲ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಪತ್ತು ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಜಾಗೃತಿ ಕ್ರಮಗಳ ಬಗ್ಗೆ ಡೆಮೋ ನೀಡುತ್ತಿದ್ದ ಸಂದರ್ಭ ಅವಘಡ ನಡೆದಿದೆ.ಸುರಕ್ಷತೆಗಾಗಿ ಒಂದು ಹಗ್ಗ ಕಟ್ಟಲಾಗಿತ್ತು. ಕೆಳಗಡೆ ಯುವಕರ ತಂಡ ನೆಟ್ ಅನ್ನು ಹಿಡಿದುಕೊಂಡಿದ್ದರು.
ಮೃತ ವಿದ್ಯಾರ್ಥಿನಿ ಲೋಕೇಶ್ವರಿ ಈ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎರಡನೇ ಮಹಡಿಯಲ್ಲಿ ಕುಳಿತಿದ್ದ ಆಕೆ ಕೆಳಗೆ ಬೀಳಬೇಕು ಎನ್ನುವಾಗ ಕೊಂಚ ಆತಂಕದಲ್ಲಿದ್ದರು. ನಂತರ ಇನ್ನೇನು ಮುಂದಕ್ಕೆ ಹಾರಬೇಕು ಎನ್ನುವಷ್ಟರಲ್ಲಿ ಆಕೆಯ ಹಿಂದೆ ನಿಂತಿದ್ದ ಟ್ರೈನರ್ ಆಕೆಯನ್ನು ತಳ್ಳಿದ್ದಾನೆ. ಮೊದಲೇ ಆತಂಕದಲ್ಲಿದ್ದ ಆಕೆ ಮುಂದಕ್ಕೆ ಹಾರದ ಪರಿಣಾಮ ತಲೆ ಅಪ್ಪಳಿಸಿ ಸಾವನ್ನಪ್ಪಿದ್ದಾಳೆ.
