ಹೈದರಾಬಾದ್ [ಜೂ.28] : ಎರಡು ವರ್ಷದ ಹಿಂದೆ ಬಾಲಕ ನೊಬ್ಬನ ಜೊತೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ವ್ಯಕ್ತಿನೊಬ್ಬನಿಗೆ ಇಲ್ಲಿನ ಕೋರ್ಟ್ ವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. 

ಅಪರಾಧ ಎಸುಗುವ ವೇಳೆ ಬಾಲೋಪಿ 17 ವರ್ಷದವನಾಗಿದ್ದ. ಬಾಲಾರೋಪಿಯೊಬ್ಬನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿರುವುದು ದೇಶದಲ್ಲೇ ಮೊದಲು.

ಪ್ರಕರಣದ ತೀರ್ಪು ಪ್ರಕಟಿಸಿದ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ಜಡ್ಜ್ ಸುನೀತಾ ಕುಂಚಾಲಾ, ಬಾಲಾರೋಪಿಯನ್ನು ಪೋಸ್ಕೋ, ಅಪಹರಣ, ಕೊಲೆ ಹಾಗೂ ಇತರ ಸೆಕ್ಷನ್‌ಗಳ ಅಡಿ ದೋಷಿ ಎಂದು ತೀರ್ಪು ನೀಡಿದ್ದಾರೆ.