ಭೀಮನ ಅಮಾವಾಸ್ಯೆ ದಿನ ಬಂತೆಂದರೆ ಸಾಕು ಕಾಲಚಕ್ರ 18 ವರ್ಷಗಳ ಹಿಂದಕ್ಕೆ ಹೊರಳುತ್ತದೆ. ಅಂದು ಭೀಮನ ಅಮಾವಾಸ್ಯೆ. ಅದು ಜುಲೈ 30, 2000. ಪತಿಗೆ ವಿಶೇಷ ಸ್ಥಾನ ನೀಡಿರುವ ಇದೇ ದಿನ ವರನಟ ಡಾ. ರಾಜ್ ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿ ಕಾಡಿಗೆ ಕದ್ದೊಯ್ಯುತ್ತಾನೆ.

ಇಲ್ಲಿಗೆ 18 ವರ್ಷ ಕಳೆದಿದೆ. ಡಾ. ರಾಜ್ ಕುಮಾರ್ ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ಪಾರ್ವತಮ್ಮ ಅವರನ್ನು ನಾವು ಕಳೆದುಕೊಂಡಿದ್ದೇವೆ. ಕನ್ನಡದ ಸಾರ್ವಭೌಮ ಕಾಡುಗಳ್ಳನ ಜತೆ ಭೀಮನ ಅಮಾವಾಸ್ಯೆಜಯಿಂದ 108 ದಿನ ಕಾಡಲ್ಲಿ ಅಲೆಯುತ್ತಾರೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಸರಕಾರಗಳೆರಡೂ ನಿರಂತರ ಯತ್ನ ಮಾಡಿ ಡಾ. ರಾಜ್ ಅವರನ್ನು ಬಿಡಿಸಿಕೊಂಡು ಬಂದಿರುವುದು ಇತಿಹಾಸ. ವೀರಪ್ಪನ್ ಸಹ ನಂತರ ಅಷ್ಟೆ ದಾರುಣ ಹತ್ಯೆಗೆ ಈಡಾಗುತ್ತಾನೆ.

ವೀರಪ್ಪನ್ ಹತ್ಯೆಯಾಗಿರಬಹುದು. ಆದರೆ ವೀರಪ್ಪನ್ ಅಂತಹ ಮನಸ್ಸುಗಳು ಸಮಾಜವನ್ನು ಕೊಳ್ಳೆ ಹೊಡೆಯುತ್ತಿವೆ.  ಕಾಲ ಮಸರಿದಿದೆ. ವರ್ಷವೂ ಭೀಮನ ಅಮಾವಾಸ್ಯೆ ಬರುತ್ತದೆ. ಗಂಡಂದಿರಿಗೆ ಪತಿವ್ರತೆಯರು ಪೂಜೆ ಮಾಡುತ್ತಾರೆ. ಆದರೆ ಡಾ. ರಾಜ್ ಅಪಹರಣದ ಕರಾಳ ನೆನಪು ಮಾತ್ರ ಮರೆಯಾಗಲ್ಲ.