ಚಂಡಮಾರುತದಿಂದಾಗಿ ಮರಗಳು ಉರುಳಿವೆ, ಕಟ್ಟಡಗಳು ಹಾನಿಯಾಗಿವೆ. ಬಾಳೆ ತೋಟ, ಪಪ್ಪಾಯಿ, ಭತ್ತ ಮತ್ತಿತರ ಬೆಳೆಗಳಿಗೆ ಹಾನಿಯಾಗಿದೆ. ಮನೆಗಳ ಮೇಲ್ಚಾವಣಿ ಹಾರಿ ಹೋಗಿವೆ. ವಿದ್ಯುತ್ ಕಂಬಗಳ ನೆಲಕ್ಕುರುಳಿವೆ. ವಿದ್ಯುತ್‌ ಪೂರೈಕೆ ಸ್ಥಗಿತಗೊಂಡ ಕಾರಣ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ತೊಂದರೆಯಾಗಿದೆ.

ಚೆನ್ನೈ(ಡಿ.14): ವಾರ್ಧಾ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ 6,750 ಕೋಟಿಯಷ್ಟು ನಷ್ಟವಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘ ಅಂದಾಜಿಸಿದೆ.

ಚಂಡಮಾರುತದಿಂದಾಗಿ ಮರಗಳು ಉರುಳಿವೆ, ಕಟ್ಟಡಗಳು ಹಾನಿಯಾಗಿವೆ. ಬಾಳೆ ತೋಟ, ಪಪ್ಪಾಯಿ, ಭತ್ತ ಮತ್ತಿತರ ಬೆಳೆಗಳಿಗೆ ಹಾನಿಯಾಗಿದೆ. ಮನೆಗಳ ಮೇಲ್ಚಾವಣಿ ಹಾರಿ ಹೋಗಿವೆ. ವಿದ್ಯುತ್ ಕಂಬಗಳ ನೆಲಕ್ಕುರುಳಿವೆ. ವಿದ್ಯುತ್‌ ಪೂರೈಕೆ ಸ್ಥಗಿತಗೊಂಡ ಕಾರಣ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ತೊಂದರೆಯಾಗಿದೆ.

ವಿಮಾನ ಮತ್ತು ರೈಲು ಸೇರಿ ಎಲ್ಲ ಬಗೆಯ ಸಂಚಾರ ಸ್ಥಗಿತಗೊಂಡ ಕಾರಣ ಅರ್ಥ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಇನ್ನೂ ವಾರ್ಧಾ ಚಂಡಮಾರುತದಿಂದಾಗಿ ತಮಿಳುನಾಡಿನ ಆರು ಜಿಲ್ಲೆಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.