Asianet Suvarna News Asianet Suvarna News

ಜೈಶ್ರೀರಾಮ್‌ ಎನ್ನದ್ದಕ್ಕೆ 17 ವರ್ಷದ ಯವಕನ ಬೆಂಕಿ ಹಚ್ಚಿ ಸುಟ್ಟರು!

ಜೈಶ್ರೀರಾಮ್‌ ಎನ್ನದ್ದಕ್ಕೆ 17 ವರ್ಷದ ಯವಕನ ಬೆಂಕಿ ಹಚ್ಚಿ ಸುಟ್ಟರು!| ಶೇ.50 ರಷ್ಟು ಸುಟ್ಟಗಾಯಕ್ಕೆ ತುತ್ತಾಗಿದ್ದ ಖಾಲಿದ್‌|  ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಾವು

17 year old set on fire for not chanting Jai Shri Ram dies
Author
Bangalore, First Published Jul 31, 2019, 8:37 AM IST
  • Facebook
  • Twitter
  • Whatsapp

ಚಂದೌಲಿ[ಜು.31]: ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗದ್ದಕ್ಕೆ ಯುವಕನೋರ್ವನನ್ನು ಬೆಂಕಿ ಹಚ್ಚಿ ಸುಟ್ಟಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಲಖನೌದ ಸೈಯದ್‌ ರಾಜಾನಗರದ ಮಹಮ್ಮದ್‌ ಖಾಲಿದ್‌ ಮೃತ ಯುವಕ.

ನಾಲ್ವರ ಗುಂಪೊಂದು ಮಹಮ್ಮದ್‌ಗೆ ಜೈಶ್ರೀರಾಮ್‌ ಎಂದು ಘೋಷಣೆ ಕೂಗುವಂತೆ ಸೂಚಿಸಿತ್ತು. ಅದಕ್ಕೆ ಆತ ಒಪ್ಪದೇ ಇದ್ದಾಗ ಆತನನ್ನು ಅಪಹರಿಸಿ, ಆತನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿತ್ತು ಎನ್ನಲಾಗಿದೆ. ಶೇ.50 ರಷ್ಟುಸುಟ್ಟಗಾಯಕ್ಕೆ ತುತ್ತಾಗಿದ್ದ ಖಾಲಿದ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ.

ಜೈ ಶ್ರಿರಾಮ್‌ ಎನ್ನದ್ದಕ್ಕೆ ಮಗನನ್ನು ಕೊಲೆ ಮಾಡಲಾಗಿದೆ ಎಂದು ಮೃತ ಖಾಲಿದ್‌ನ ತಂದೆ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios