ಇಬ್ಬರು ಸ್ನೇಹಿತರ ಜೊತೆ ಯುವತಿ ಊಟ ಮತ್ತು ಶಾಪಿಂಗ್`ಗೆ ತೆರಳಿದ್ದಳು. ಶಾಪಿಂಗ್ ಬಳಿಕ ಇಬ್ಬರು ಹುಡುಗರು ಆಕೆಯನ್ನ ಡ್ರಾಪ್ ಮಾಡಿದ್ದು, ಅವರೇ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ನವದೆಹಲಿ(ಡಿ.21): ಮರ್ಸಿಡಿಸ್ ಕಾರಿನಲ್ಲಿದ್ದ ಮನೆಯ ಮುಂದೆಯೇ 17ರ ಯುವತಿಯನ್ನ ಗುಂಡಿಕ್ಕಿ ಕೊಂದಿರುವ ಘಟನೆ ನವದೆಹಲಿಯ ನಜಾಫಗಢದಲ್ಲಿ ನಿನ್ನೆ ಸಂಜೆ ನಡೆದಿದೆ. ಪ್ರಿಯಕರನೇ ಹತ್ಯೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇಬ್ಬರು ಸ್ನೇಹಿತರ ಜೊತೆ ಯುವತಿ ಊಟ ಮತ್ತು ಶಾಪಿಂಗ್`ಗೆ ತೆರಳಿದ್ದಳು. ಶಾಪಿಂಗ್ ಬಳಿಕ ಇಬ್ಬರು ಹುಡುಗರು ಆಕೆಯನ್ನ ಡ್ರಾಪ್ ಮಾಡಿದ್ದು, ಅವರೇ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
`ಕಾರು ಬಂದಿದ್ದನ್ನ ನಾನು ನೋಡಿದೆ. ಒಬ್ಬ ಹುಡುಗ ಹೊರಗಡೆ ಬಂದ. ಮತ್ತೊಬ್ಬ ಹುಡುಗ ನನ್ನ ಮಗಳ ಜೊತೆಯೇ ಒಳಗಡೆ ಉಳಿದಿದ್ದ. ಇದ್ದಕ್ಕಿದ್ದಮತೆ ಗನ್ ಫೈರ್ ಶಬ್ದ ಕೇಳಿಸಿತು' ಎಂದು ಯುವತಿಯ ತಾಯಿ ಪೊಲೀಸರ ಬಳಿ ಹೇಳಿದ್ದಾಳೆ.
ತಾಯಿ ಕಾರಿನ ಬಳಿ ತೆರಳುತ್ತಿದ್ದಂತೆ ಆಘಾತವಾಗಿದೆ. ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಜೊತೆಗಿದ್ದ ಹುಡುಗರು ಅಲ್ಲಿಂದ ಕಾಲ್ಕಿತ್ತಿದ್ದರು. ಬಳಿಕ ತಾಯಿಯೇ ಮಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗನ್ ವಶಪಡಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಬೇಟೆಗೆ ಬಲೆ ಬೀಸಿದ್ದಾರೆ.